ಐವರ್ನಾಡು : ಚೆಮ್ನೂರು ನಲ್ಲಿ ಮನೆಗೆ ಬರೆ ಕುಸಿತ – ಅಪಾಯದಲ್ಲಿರುವ ಮನೆ

0

ಮನೆಯ ಹಿಂಬದಿಗೆ ಹಾನಿ – ಮನೆಯವರ ಸ್ಥಳಾಂತರಕ್ಕೆ ಸಿದ್ಧತೆ

ಐವರ್ನಾಡು ಗ್ರಾಮದ ಚೆಮ್ನೂರು ಎಂಬಲ್ಲಿ ಭಾರೀ ಮಳೆಗೆ ಮನೆಯ ಹಿಂಬದಿ ಇರುವ ಬರೆ ಕುಸಿದು ಬಿದ್ದಿದ್ದು ಮನೆಗೆ ಹಾನಿಯಾಗಿದೆ.
ಚೆಮ್ನೂರು ತಿಮ್ಮಪ್ಪ ಗೌಡ ಎಂಬವರ ಮನೆಗೆ ಮನೆಯ ಹಿಂದೆ ಇರುವ ರಬ್ಬರ್ ತೋಟದ ಬರೆ ಕುಸಿದು ಬಿದ್ದು ಮನೆಯ ಹಿಂಬದಿ ಭಾಗಕ್ಕೆ ಹಾನಿಯಾಗಿದೆ.
ಇನ್ನಷ್ಡು ಬರೆ ಕುಸಿದು ಬಿದ್ದರೆ ಮನೆ ಸಂಪೂರ್ಣ ಹಾನಿಯಾಗಬಹುದು.


ಮನೆಯಲ್ಲಿ ವಾಸ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದ್ದು ಮನೆಯವರನ್ನು ಸ್ಥಳಾಂತರಿಸುವ ಬಗ್ಗೆ ಚಿಂತಿಸಲಾಗಿದೆ.
ಆ.1 ರಂದು ಬರೆ ಕುಸಿಯಲು ಪ್ರಾರಂಭಗೊಂಡಿದ್ದು ರಾತ್ರಿ ಮನೆಯವರು ಸುಳ್ಯದ ಸಂಬಂಧಿಕರ ಮನೆಗೆ ಬಂದು ವಾಸವಿದ್ದರು.
ಇಂದು ಬೆಳಿಗ್ಗೆ ಮನೆಗೆ ಬಂದಾಗ ಬರೆ ಮತ್ತಷ್ಟು ಕುಸಿದಿರುವುದು ಕಂಡು ಬಂತು.
ಆ.2 ರಂದು ಬೆಳಿಗ್ಗೆ ಸ್ಥಳಕ್ಕೆ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ,ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಸದಸ್ಯ ರಂಜನ್ ಮೂಲೆತೋಟ,ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ನಿಖಿಲ್ ಮಡ್ತಿಲ,ಶಾಂತಾರಾಮ ಕಣಿಲೆಗುಂಡಿ, ರಂಜಿತ್ ಮೂಲೆತೋಟ ಭೇಟಿ ನೀಡಿದರು.


ಆ.1 ರಂದು ಪಂಚಾಯತ್ ಪಿಡಿಒ , ಪಂಚಾಯತ್ ಸಿಬ್ಬಂದಿಗಳು,ಗ್ರಾಮ ಸಹಾಯಕರು ಭೇಟಿ ನೀಡಿ ಪರಿಶೀಲಿಸಿರುವುದಾಗಿ ತಿಳಿದು ಬಂದಿದೆ.
ಇನ್ನೂ ಮಳೆ ಮುಂದುವರಿದರೆ ಮನೆಯವರನ್ನು ಚೆಮ್ನೂರು ಆದಿಮನೆಗೆ ಸ್ಥಳಾಂತರಿಸುವ ಬಗ್ಗೆ ಮಾತುಕತೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.