ಜು.4: ಪಂಜದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಆಟಿ ಉತ್ಸವ

0

ಪಂಜ ಲಯನ್ಸ್ ಕ್ಲಬ್ ವತಿಯಿಂದ ಆ.4ರಂದು ಸಂಜೆ ಗಂಟೆ 6.30 ರಿಂದ ಆಟಿ ಉತ್ಸವ ಪಂಜ ಲಯನ್ಸ್ ಭವನದಲ್ಲಿ ಜರುಗಲಿದೆ.
ಲಯನ್ಸ್ ಜಿಲ್ಲೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀನಿವಾಸ್ ಪೂಜಾರಿ ಮೇಲ್ಕಾರ್ ಉದ್ಘಾಟಿಸಲಿದ್ದಾರೆ. ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ ಸಭಾಧ್ಯಕ್ಷತೆ ವಹಿಸಲಿದ್ದಾರೆ. ‌

ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ
ದುರ್ಗಾಕುಮಾರ್ ನಾಯರ್ ಕೆರೆ ಆಟ ತಿಂಗಳ ವೈಜ್ಞಾನಿಕ ಮಹತ್ವ ಕುರಿತು ಪ್ರಾಧಾನ ಭಾಷಣ ಮಾಡಲಿದ್ದಾರೆ.ಜನಪ್ರಿಯ ನಾಟಿ ವೈದ್ಯ ಶ್ರೀಮತಿ ಬಾಲಕ್ಕ ಕೊರಪ್ಪಣೆ ಸನ್ಮಾನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆಟಿ ತಿಂಗಳ ಖಾದ್ಯಗಳ ಪ್ರದರ್ಶನ ಮತ್ತು ಸಹಭೋಜನ ನಡೆಯಲಿದೆ.