ಕಡಿತಗೊಂಡ ರಸ್ತೆಯನ್ನು ದುರಸ್ತಿ ಪಡಿಸಿದ
ಸ್ಥಳೀಯರು
ಕಳೆದ ಕೆಲವು ದಿನಗಳಿಂದ ವಿಪರೀತ ಮಳೆಯ ಕಾರಣದಿಂದ ಕೂರ್ನಡ್ಕ ದಲ್ಲಿರುವ ಸಂಪರ್ಕದ ರಸ್ತೆಯ ಮುಳುಗು ಸೇತುವೆಯಡಿಯ ಮೋರಿಯ ಪೈಪುಗಳಲ್ಲಿ ನೀರಿನೊಂದಿಗೆ ಬಂದ ಮರದ ಕೊಂಬೆಗಳು ಕಸ ಕಡ್ಡಿಗಳು ಸಿಕ್ಕಿ ಹಾಕಿಕೊಂಡಿದ್ದು ರಸ್ತೆಯ ಮೇಲೆ ನೀರು ಹರಿದು ಸಂಪರ್ಕಕಡಿತಗೊಂಡಿತು.
ಈ ಬಗ್ಗೆ ಮಾಧ್ಯಮ ಜಾಲತಾಣಗಳಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ವಿಷಯ ತಿಳಿದು ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಣಿಕಂಠ, ಆಲೆಟ್ಟಿ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ ಮತ್ತು ಊರಿನ ನಾಗರಿಕರ ಸಹಕಾರದೊಂದಿಗೆ ಸುಧಾಕರ ಬೆಳ್ಳೂರು ರವರಿಗೆ ಸೇರಿದ ಹಿಟಾಚಿ ಬಳಸಿ ಕಸ ಕಡ್ಡಿಗಳನ್ನು ತೆರವುಗೊಳಿಸಲಾಯಿತು. ಸ್ಥಳೀಯರು ಸೇರಿ
ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿರುವ ರಸ್ತೆಯ ಹೊಂಡಕ್ಕೆ ಕಲ್ಲು ಮಣ್ಣು ತುಂಬಿಸಿ ತಾತ್ಕಾಲಿಕ ಸಂಪರ್ಕದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಒಂದು ವೇಳೆ ಮತ್ತೆ ಮಳೆ ಜೋರಾಗಿ ಸುರಿದರೆ ನೀರಿನ ಪ್ರಮಾಣ ಹೆಚ್ಚಾದಲ್ಲಿ ರಸ್ತೆ ಕೊಚ್ಚಿಕೊಂಡು ಹೋಗುವ ಎಲ್ಲಾ ಸಾಧ್ಯತೆಗಳಿವೆ.