ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದಿಂದ ಶ್ರೀಮತಿ ಪುಷ್ಪಾವತಿ ಹೂವಪ್ಪ ಗೌಡರವರಿಗೆ ಗೌರವಾರ್ಪಣೆ

0

ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಹೂವಪ್ಪ ಗೌಡ ಕಂಚುಗಾರಗದ್ದೆ ಅವರು ಇತ್ತೀಚೆಗೆ ನಿಧನರಾಗಿದ್ದು ಅವರ ಪತ್ನಿ ಪುಷ್ಪಾವತಿಯವರನ್ನು ಸಂಸ್ಥೆಯ ವತಿಯಿಂದ ಜು.31 ರಂದು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಹರ್ಷಕುಮಾರ್ ದೇವಜನ, ಉಪಾಧ್ಯಕ್ಷರಾದ ಶೇಖರ್ ಅಂಬೆಕಲ್ಲು, ನಿರ್ದೇಶಕರುಗಳು, ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.