ಹರಿಹರ ಪಲ್ಲತಡ್ಕದ ಮುಂಡಾಜೆ ಮನೆತನದವರಾಗಿದ್ದು ಕಾಪುವಿನಲ್ಲಿ ಹಲವು ವರ್ಷಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸಿದ್ದ ರಾಮದಾಸ್ ಗೌಡ ಮುಂಡಾಜೆ ಅವರು ಇಂದು (ಆ.6)ಸ್ವಗೃಹದಲ್ಲಿ ನಿಧನರಾದರು.ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ದುರ್ಗಾ ಸುಮಿತ್ರ, ಪುತ್ರಿ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಶ್ರೀಮತಿ ಡಾ. ಚಂದ್ರಿಕಾ ಮನು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಹರಿಹರ ಪಲ್ಲತಡ್ಕದ ಮುಂಡಾಜೆಯಲ್ಲಿ ನಡೆಯಲಿದೆ.