(ನಾಳೆ) ಆ.9: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ನಾಗರ ಪಂಚಮಿ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ನಾಗನಕಟ್ಟೆಗಳಲ್ಲಿ ಆ.9 ರಂದು ನಾಗರ ಪಂಚಮಿ ವಿವಿಧ ವೈಧಿಕ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ.

ದೇಗುಲದ ಸಮೀಪದ ನಾಗನ ಕಟ್ಟೆಯಲ್ಲಿ ಪೂರ್ವಾಹ್ನ ಗಂಟೆ 9 ಕ್ಕೆ ಹಾಗೂ ಗರಡಿ ಬೈಲ್ ಮೂಲ ನಾಗನಕಟ್ಟೆಯಲ್ಲಿ ಪೂರ್ವಾಹ್ನ ಗಂಟೆ 11.30 ಕ್ಕೆ ಪೂಜೆ ನಡೆಯಲಿದೆ.
ಆ ಪ್ರಯುಕ್ತ ಹಣ್ಣುಕಾಯಿ, ಪಂಚಾಮೃತ ಅಭಿಷೇಕ,ನಾಗ ತಂಬಿಲ ಸೇವೆಗಳು ನಡೆಯಲಿದೆ .

ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.