ದುಗ್ಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಆಚರಣೆ

0

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಆಚರಣೆ ಇಂದು ನಡೆಯಿತು.
ನಾಗದೇವರಿಗೆ ಕ್ಷೀರಾಭಿಷೇಕ, ಹಾಲಾಭಿಷೇಕ ನಡೆದು, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.


ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ ಪೂಜಾ ಕಾರ್ಯ ನೆರವೇರಿಸಿದರು.


ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ಕುಶಾಕಪ್ಪ ಗೌಡ ಕಜೆ, ಗೌರವಾಧ್ಯಕ್ಷ ಸುಂದರ ರಾವ್, ಕಾರ್ಯದರ್ಶಿ ಶೇಖರ ಕುದ್ಪಾಜೆ , ನ.ಪಂ.ಸದಸ್ಯರಾದ ಬಾಲಕೃಷ್ಣ ರೈ ದುಗ್ಗಲಡ್ಕ ಹಾಗೂ ಸಮಿತಿ ಯ ಸದಸ್ಯರು, ಯುವ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ನಾಯ್ಕ, ಮತ್ತು ಸದಸ್ಯರು, ಊರ ಭಕ್ತಾದಿಗಳು ಉಪಸ್ಥಿತರಿದ್ದರು