ಈ ಬಾರಿ ಅರಂತೋಡಿನಲ್ಲಿ ಸಾಹಿತ್ಯ ಸಮ್ಮೇಳನ

0

ಸರಳ – ಅರ್ಥಪೂರ್ಣ ಸಾಹಿತ್ಯ ಹಬ್ಬ ನಡೆಸಲು ತೀರ್ಮಾನ

ಸೆ. 16 ರಂದು ಸ್ವಾಗತ ಸಮಿತಿ ರಚನೆಗೆ ನಿರ್ಧಾರ

ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನ ಈ ಬಾರಿ ಅರಂತೋಡಿನಲ್ಲಿ ನಡೆಸುವ ಕುರಿತು ಪೂರ್ವಭಾವಿ ಸಭೆಯು ಆ. 9 ರಂದು ಅರಂತೋಡು ನೆ. ಸ್ಮಾ. ಪ. ಪೂ. ಕಾಲೇಜಿನಲ್ಲಿ ನಡೆಯಿತು. ಸಭೆಯಲ್ಲಿ ಸರಳ ಹಾಗೂ ಅರ್ಥಪೂರ್ಣ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು.


ಕ. ಸಾ. ಪ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿ ಅರಂತೋಡಿನಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಿದ್ದು, ಸರಳ ಸಮ್ಮೇಳನದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅರಂತೋಡು ಕಾಲೇಜಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿದರೆ ಇರುವ ಸೌಲಭ್ಯ ಹಾಗೂ ಸಂಪನ್ಮೂಲದ ಕುರಿತು ಕೆ. ಆರ್. ಗಂಗಾಧರ್ ರವರು ಮಾತನಾಡಿ ಸರಳ ಸಮ್ಮೇಳನ ನಡೆಸಲು ಬೇಕಾಗುವ ಅಂದಾಜು ವೆಚ್ಚದ ಕುರಿತು ವಿವರಿಸಿದರು.


ಬಳಿಕ ಸಭೆಯಲ್ಲಿ ಭಾಗವಹಿಸಿದವರು ಸಮ್ಮೇಳನ ನಡೆಸುವ ಹಾಗೂ ಖರ್ಚು ವೆಚ್ಚದ ಕುರಿತು ಅಭಿಪ್ರಾಯ ಮಂಡಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಪಂಚಾಯತ್ ಗಳಿಂದ ಸಹಕಾರ ಒದಗಿಸುವ ಕುರಿತು ಮಾತನಾಡಿದರು. ಎಲ್ಲರ ಅಭಿಪ್ರಾಯದಂತೆ ಸಾಹಿತ್ಯ ಸಮ್ಮೇಳನವನ್ನು ಅರಂತೋಡಿನಲ್ಲಿ ದಶಂಬರ್ ತಿಂಗಳಿನಲ್ಲಿ ನಡೆಸುವುದು. ಸಮ್ಮೇಳನದ ಯಶಸ್ಸಿಗಾಗಿ ಸ್ವಾಗತ ಸಮಿತಿ ರಚಿಸಲು ಸೆ. 16 ರಂದು ಕಾಲೇಜಿನಲ್ಲಿ ಎಲ್ಲರನ್ನು ಸೇರಿಸಿ ಸಮಿತಿ ರಚನೆ ಯ ಸಭೆ ಕರೆಯುವುದಾಗಿ ಚಂದ್ರಶೇಖರ ಪೇರಾಲು ಹೇಳಿದರು.


ವೇದಿಕೆಯಲ್ಲಿ ಕ. ಸಾ. ಪ. ಗೌರವ ಕಾರ್ಯದರ್ಶಿಗಳಾದ
ತೇಜಸ್ವಿ ಕಡಪಾಲ, ಶ್ರೀಮತಿ ಚಂದ್ರಮತಿ, ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ,ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಕಾಲೇಜಿನ ಪ್ರಾoಶುಪಾಲ ಸುರೇಶ ವಾಗ್ಲೆ ಉಪಸ್ಥಿತರಿದ್ದರು.


ಸಭೆಯಲ್ಲಿ ಕ ಸಾ ಪ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಾಮಚಂದ್ರ ಪಲ್ಲತಡ್ಕ, ತಾಲೂಕು ಘಟಕದ ಕೋಶಾಧಿಕಾರಿ ದಯಾನಂದ ಆಳ್ವ, ತಾಲೂಕು ಘಟಕದ ಸದಸ್ಯರಾದ ದೇವಪ್ಪ ಹೈದಂಗೂರು, ಜಯರಾಮ್ ಶೆಟ್ಟಿ, ಹೋಬಳಿ ಘಟಕದ ಸದಸ್ಯರಾದ ಕುಮಾರಸ್ವಾಮಿ ತೆಕ್ಕುಂಜ, ಅರಂತೋಡು ದುರ್ಗಾಮಾತ ಭಜನಾ ಮಂಡಳಿ ಅಧ್ಯಕ್ಷ ಕೆ ಆರ್ ಪದ್ಮನಾಭ, ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ತಾ. ಪಂ. ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ನಿವೃತ್ತ ಮುಖ್ಯ ಶಿಕ್ಷಕರಾದ ಚಿದಾನಂದ ಮಾಸ್ತರ್, ಹೊನ್ನಪ್ಪ ಮಾಸ್ಟರ್ ಅಡ್ತಲೆ, ಕಾಲೇಜಿನ ಉಪನ್ಯಾಸಕ ಮೋಹನ್ ಚಂದ್ರ, ಅರಂತೋಡು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ಬನ, ಕಾಲೇಜಿನ ಆಡಳಿತ ಮಂಡಳಿ ಪದಾಧಿಕಾರಿ ಎ. ಸಿ. ವಸಂತ, ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಹಿರಿಯ ವಿದ್ಯಾರ್ಥಿ ಸಂಘದ ಅಶ್ರಫ್ ಗುಂಡಿ, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ಸುಳ್ಯ ಹೋಬಳಿ ಘಟಕದ ನಿರ್ದೇಶಕರಾದ ಕಿಶೋರ್ ಕುಮಾರ್ ಕಿರ್ಲಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ಹೋಬಳಿ ಘಟಕದ ಕಾರ್ಯದರ್ಶಿ ಅಬ್ದುಲ್ಲ ಅರಂತೋಡು ವಂದಿಸಿದರು