ನಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ನಾವು ಮಾಡುವ ಕರ್ಮ ಶ್ರೇಷ್ಠ ವಾಗಿರಬೇಕು.
ಅನೇಕ ಬಂಧನಗಳಿಂದ ಮುಕ್ತಿ ಸಿಗಬೇಕಾದರೆ ರಕ್ಷಣೆಯ ರಕ್ಷೆ ಬೇಕು. ಈಶ್ವರೀಯ ಧ್ಯಾನದಿಂದ ಜ್ಞಾನದ ಮುಕ್ತಿ ಲಭಿಸುವುದು-
ಬ್ರಹ್ಮಕುಮಾರೀಸ್ ಬಿ.ಕೆ.ನಿರ್ಮಲ
ಅಂಬಟೆಡ್ಕದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಧ್ಯಾನ ಕೇಂದ್ರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮದ ಆಚರಣೆಯನ್ನು ಆ. 9 ರಂದು ಆಚರಿಸಲಾಯಿತು.
ಹುಬ್ಬಳ್ಳಿ ವಲಯದ ಹಿರಿಯ ಸಂಚಾಲಕಿ ಬ್ರಹ್ಮಕುಮಾರೀಸ್ ಬಿ.ಕೆ ನಿರ್ಮಲ ರವರು ರಕ್ಷಾ ಬಂಧನದ ಕುರಿತು ಸಂದೇಶ ನೀಡಿದರು.
ಸುಳ್ಯ ಕೇಂದ್ರದ ಸಂಚಾಲಕಿ ಬ್ರಹ್ಮಕುಮಾರೀಸ್ ಉಮಾ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಬ್ರಹ್ಮಕುಮಾರೀಸ್ ಬಿ.ಕೆ.ನಿರ್ಮಲ, ಸುರತ್ಕಲ್ ವಲಯ ಸಂಚಾಲಕಿ ಪ್ರಭಾ ಹಾಗೂ
ದಾಕ್ಷಾಯಿಣಿ ಯವರನ್ನು ಸನ್ಮಾನಿಸಿ ಗೌರವಿಸಿದರು.
ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ ಬಳಿಕ ರಕ್ಷೆಯನ್ನು
ಕಟ್ಟುವ ಮೂಲಕ ಸಹೋದರತೆಯ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ
ಸ್ಥಳೀಯ ಸಂಘ ಸಂಸ್ಥೆಗಳಪದಾಧಿಕಾರಿಗಳು, ಧ್ಯಾನ ಕೇಂದ್ರದ ಸದಸ್ಯರು ಮತ್ತು ಮಹಿಳೆಯರು, ಮಕ್ಕಳುಭಾಗವಹಿಸಿದರು.
ಉಮೇಶ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.