ಮುಡಾ ಕೇಸ್ ಆರೋಪದ ವಿರುದ್ಧ ಮೈಸೂರಿನಲ್ಲಿ ಕಾಂಗ್ರೆಸ್ ಜನಾಂದೋಲನ
ಸಮಾವೇಶಕ್ಕೆ ಹರಿದು ಬಂದ ಜನಸಾಗರ
ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆಶಿ ಸೇರಿದಂತೆ ವಿವಿಧ ಸಚಿವರು ಭಾಗಿ
ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಹಮ್ಮಿಕೊಂಡಿರುವ ಪಾದಯಾತ್ರೆ ಗೆ ಮರು ಉತ್ತರವಾಗಿ ಮೈಸೂರು ಮಹಾರಾಜ ಕಾಲೇಜ್ ಮೈದಾನದಲ್ಲಿ ಆ ೯ ರಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ವತಿಯಿಂದ ಜನಾಂದೋಲನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾವೇಶದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೇರಿದಂತೆ ವಿವಿಧ ಸಂಸದರು ಸಚಿವರು, ಕಾಂಗ್ರೆಸ್ ಶಾಸಕರುಗಳು ಭಾಗವಹಿಸಿದ್ದರು.
ಸಮಾವೇಶ ಬೆಳಿಗ್ಗೆ ೧೧ ಘಂಟೆಗೆ ಸರಿಯಾಗಿ ಆರಂಭಗೊಂಡಿತು.
ರಾಜ್ಯದ ನಾನಾ ಭಾಗಗಳಿಂದ ಸಾವಿರರಾರು ಮಂದಿ ಕಾರ್ಯಕರ್ತರುಗಳು, ಸಾರ್ವಜನಿಕರು ಸಮಾವೇಶ ಮೈದಾನದಲ್ಲಿ ಕ್ಕಿಕ್ಕಿರಿದು ತುಂಬಿದ್ದರು.
ವೇದಿಯಲ್ಲಿ ಉಪಸ್ಥಿತರಿದ್ದ ನಾಯಕರುಗಳು ಮಾತನಾಡಿ ಬಿ ಜೆ ಪಿ ಪಕ್ಷದವರಿಗೆ ಕಾಂಗ್ರೆಸ್‌ನ ಬಗ್ಗೆ ಮಾತಾಡುವ ನೈತಿಕತೆಯೇ ಇಲ್ಲ. ಕಾರಣ ಅವರ ಅಧಿಕಾರದ ಸಮಯದಲ್ಲಿ ಅವರು ಮಾಡಿರುವ ಭ್ರಷ್ಟಾಚಾರ ಇಡೀ ರಾಜ್ಯತ ಜನತೆಗೆ ಗೊತ್ತಿರುವಂತದ್ದು. ಇದೀಗ ಸಿದ್ದರಾಮಯ್ಯನವರ ಬಗ್ಗೆ ಇಲ್ಲ ಸಲ್ಲದ ಆರೋಪವನ್ನು ಮಾಡಿ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯದ ಅಭಿವೃದ್ಧಿ ಮಾಡುತ್ತಿರುವುದನ್ನು ಅವರಿಂದ ನೋಡಲು ಸಾಧ್ಯವಾಗದೆ ಏನಾದರೂ ಮಾಡಿ ತಡೆಯಲು ಕುತಂತ್ರ ಮಾಡಲು ಹೊರಟಿದ್ದಾರೆ. ಇದು ಅವರ ಜನ್ಮದಲ್ಲಿ ಸಾಧ್ಯವಿಲ್ಲ ಎಂದರು.
ಉಪಮುಖ್ಯ ಮಂತ್ರಿ ಡಿ. ಕೆ ಶಿ ಮಾತನಾಡಿ, ಸಿದ್ದರಾಮಯ್ಯ ಭಾವುಕ ವ್ಯಕ್ತಿ. ಅವರ ಆರೋಪ ನಿಜವಾಗಿದ್ದರೆ ಅರಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಆದರೆ ಸುಳ್ಳು ಆರೋಪ ಅವರಿಗೆ ಮಾನಸಿಕ ಹಿಂಸೆಯಾಗಿದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರ ತೇಜೋವಧೆಗೆ ಉಭಯ ಪಕ್ಷಗಳು ಮುಂದಾಗಿವೆ. ಇದಕ್ಕಾಗಿ ಇಡೀ ಪಕ್ಷ ಹಾಗೂ ಸರ್ಕಾರ ಒಂದಾಗಿ ಸಿದ್ದರಾಮಯ್ಯ ಅವರ ಪರವಾಗಿ ನಿಂತಿದ್ದೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಎ ಐ ಸಿ ಸಿ ಮುಖಂಡ ಸುರ್ಜೆವಾಲ, ಸಚಿವರುಗಳಾದ ಡಾ. ಪರಮೇಶ್ವರ್,ಕೆ ಎಚ್ ಮುನಿಯಪ್ಪ, ಝಮೀರ್ ಅಹ್ಮದ್ ಖಾನ್, ಡಾ. ಎಚ್ ಸಿ ಮಹದೇವಪ್ಪ, ಕೆ ವೇಕಟೇಶ್, ಈಶ್ವರ್ ಖಂಡ್ರೆ, ಎಂ ಬಿ ಪಾಟೀಲ್, ಕೆ ಜೆ ಜಾರ್ಜ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.