ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಬರಹಗಾರರ ಮತ್ತು ಕಲಾವಿದರ ಸಂವಾದ ಕಾರ್ಯಕ್ರಮ

0

ತಾಲೂಕಿಗೆ ಅರೆಭಾಷೆ ರಾಜಭಾಷೆಯಾಗಿದೆ, ಸಂಸ್ಕೃತಿಯ ಹಿನ್ನೆಲೆಯಲ್ಲಿ ಸಾಹಿತ್ಯರೂಪುಗೊಳ್ಳಬೇಕು

ಭತ್ತ ಬೇಸಾಯ ಪದ್ಧತಿ ಅರೆಭಾಷೆ ಸಾಹಿತ್ಯಕ್ಕೆ ಪ್ರೇರಣೆಯಾಗಿತ್ತು, ಅರೆಭಾಷೆಯ ಬೆಳವಣಿಗೆಗೆ ಸುದ್ದಿ ಮಾಧ್ಯಮದ ಕೊಡುಗೆ ಅಪಾರವಾಗಿದೆ :
ಕೆ.ಆರ್.ಗಂಗಾಧರ್

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಅರೆಭಾಷೆಯ ಬರಹಗಾರರ ಮತ್ತು ಕಲಾವಿದರರೊಂದಿಗೆ ಸಂವಾದ ಕಾರ್ಯಕ್ರಮವು ಸುಳ್ಯದ ವೆಂಕಟರಮಣ ಕೋ -ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಭವನದಲ್ಲಿ ಆ.10 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಸದಾನಂದ ಗೌಡ ಮಾವಜಿ ಯವರು ವಹಿಸಿದ್ದರು.
ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಕೆ.ಆರ್.ಗಂಗಾಧರ ರವರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಸಾಹಿತಿ ತೇಜಕುಮಾರ್ ಕುಡೆಕಲ್ಲು ರವರು ಅರೆ ಭಾಷೆಯ ಕುರಿತು ಕಲಾವಿದರ ಜತೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವೇದಿಕೆಯಲ್ಲಿ ಮುಖ್ಯ ಅಭ್ಯಾಗತರಾಗಿ ಗೌಡ ಯುವ ಸೇವಾ ಸಂಘದ ನಿಕಟ ಪೂರ್ವ ಅಧ್ಯಕ್ಷ ಚಂದ್ರ ಕೋಲ್ಚಾರು, ಅಕಾಡೆಮಿ ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್, ಪಿ.ಎಸ್.ಕಾರ್ಯಪ್ಪ, ಲೋಕೇಶ್ ಊರುಬೈಲು, ಚಂದ್ರಾವತಿ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ ಉಪಸ್ಥಿತರಿದ್ದರು.

ಕು.ಮೇಘ ಕೃಷ್ಣ ಕಾಯರ್ತೋಡಿ ಪ್ರಾರ್ಥಿಸಿದರು.
ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿದರು.
ಲೋಕೇಶ್ ಊರುಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಂದ್ರಾವತಿ ಬಡ್ಡಡ್ಕ ವಂದಿಸಿದರು.
ಲತಾಪ್ರಸಾದ್ ಕುದ್ಪಾಜೆ ಕಾರ್ಯಕ್ರಮ ನಿರೂಪಿಸಿದರು.
ಅರೆಭಾಷಿಗರು ಮತ್ತು ಭಾಷೆಯ ಅಭಿಮಾನಿಗಳು
ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.