ಸುಳ್ಯ ಗಿರಿದರ್ಶಿನಿಯಲ್ಲಿ ಆಟಿ ಕೂಟ , ಮರಾಟಿ ಸಮಾಜ ಮಹಿಳಾ ವೇದಿಕೆಯಿಂದ ಆಯೋಜನೆ.

0

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘ, ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ ಸಹಯೋಗದಲ್ಲಿ ಆಟಿಕೂಟ ಕಾರ್ಯಕ್ರಮ ಇಂದು ಗಿರಿದರ್ಶಿನಿ ಸಭಾ ಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನುಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಜನಾರ್ದನ ಬಿ.ಕುರುಂಜಿಭಾಗ್ ಉದ್ಘಾಟಿಸಿ ಶುಭ ಹಾರೈಸಿದರು. ಗೌರವಾಧ್ಯಕ್ಷ, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, ಮರಾಟಿ ಯುವ ವೇದಿಕೆ ಅಧ್ಯಕ್ಷ ಮೋಹನ್ ಪೆರಾಜೆ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಗಿರಿಜಾ ಎಂ.ವಿ. ಅಧ್ಯಕ್ಷತೆ ವಹಿಸಿದ್ದರು.


ಮರಾಟಿ ಸೇವಾ ಸಂಘದ. ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಮತ್ತು ಸುದ್ದಿ ವರದಿಗಾರ ರಮೇಶ್ ನೀರಬಿದಿರೆ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡ ಕ್ರೀಡಾ ಕೂಟದ ಆಮಂತ್ರಣವನ್ನು ಬಿಡುಗಡೆ ಮಾಡಲಾಯಿತು. ಕ್ರೀಡಾ ಕಾರ್ಯದರ್ಶಿ ರಘುನಾಥ ಜಟ್ಟಿಪಳ್ಳ ನಿರ್ವಹಿಸಿದರು.


ಕಾರ್ಯಕ್ರಮದಲ್ಲಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಕುಸುಮಾ ಜನಾರ್ದನ್ ಸ್ವಾಗತಿಸಿದರು. ರೇವತಿ ದೊಡ್ಡೇರಿ ವಂದಿಸಿದರು. ಸಂಘದ ನಿರ್ದೇಶಕಿ ಶ್ರೀಮತಿ ಸವಿತಾ ಸುಭಾಸ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಆಟಿ ಕೂಟದ ಅಂಗವಾಗಿ ಮಹಿಳಾ ವೇದಿಕೆಯವರು ತಯಾರಿಸಿದ ಆಟಿಯ ವಿವಿಧ ಖಾದ್ಯಗಳನ್ನು ಸವಿಯಲಾಯಿತು.