ಸುಳ್ಯ ನಗರದಪ್ರಮುಖ ಕಾಲು ದಾರಿ ಅಭಿವೃದ್ಧಿ ಪಡಿಸಿ…

0

ಅಧಿಕಾರಿಗಳೇ, ಜನಪ್ರತಿನಿಧಿಗಳೇ ಗಮನಹರಿಸಿ..
ಸಾರ್ವಜನಿಕ ವಲಯದ ಆಗ್ರಹ…

ಸುಳ್ಯದಕೆ.ಎಸ್.ಆರ್.ಟಿ.ಸಿ.ಬಸ್ಸು ನಿಲ್ದಾಣದ ಎದುರಿನಲ್ಲಿ ‌ರಥಬೀದಿಗೆ ಹಾದು ಹೋಗುವ ಕಾಲು ದಾರಿಯೊಂದು ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ನೆನೆಗುದಿಗೆ ಗುರಿಯಾಗಿದೆ.


ಈ ಕಾಲು ದಾರಿಯು ರಥಬೀದಿಯನ್ನು ಸಂಪರ್ಕಿಸಲು ಹತ್ತಿರದ ಪ್ರಮುಖ ದಾರಿಯಾಗಿದ್ದು ಸಿ.ಎ.ಬ್ಯಾಂಕ್ ಮತ್ತು ಸೂಂತೋಡು ಎಂಪೋರಿಯಂ ಇದರ ಮಧ್ಯ ಭಾಗದಲ್ಲಿ ಹಾದು ಹೋಗುವ ಹಾದಿಯಾಗಿದೆ.


ಈ ದಾರಿಯಲ್ಲಿ ನಿತ್ಯ ಸಾವಿರಾರು ಮಂದಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಡೆದುಕೊಂಡು ಹೋಗುತ್ತಾರೆ.

ಮುಖ್ಯ ರಸ್ತೆಯಿಂದ ಮೆಟ್ಟಿಲುಗಳನ್ನು ಹತ್ತಿ ಮುಂದಕ್ಕೆ ಸಾಗುವ ದಾರಿಯು ಮಳೆಗಾಲದಲ್ಲಿ ನೀರು ಹರಿದು ಕೆಸರು ಮತ್ತು ಹೊಂಡದಿಂದ ಕೂಡಿದೆ.


ಬೆಳೆಯುತ್ತಿರುವ ನಗರದ ಹೃದಯಭಾಗದಲ್ಲಿರುವ ದಾರಿಯಲ್ಲಿ
ಮಕ್ಕಳು, ವೃದ್ದರು ಹೋಗುತ್ತಿದ್ದು ಸಂಬಂಧ ಪಟ್ಟ ಜನಪ್ರತಿನಿಧಿಗಳು ಅಥವಾ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಕಾಂಕ್ರೀಟ್ ಅಥವಾ ಇಂಟರ್ ಲಾಕ್ ಅಳವಡಿಸಿ ಸುಸಜ್ಜಿತ ಕಾಲು ದಾರಿಯನ್ನಾಗಿ ನಿರ್ಮಿಸಬೇಕೆಂಬ ಆಗ್ರಹ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.