ಐವರ್ನಾಡು ಸ.ಪ.ಪೂ.ಕಾಲೇಜು ಪ್ರೌಢಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾಗಿ ದಯಾನಂದ ಕಟ್ಟತ್ತಾರು ಆಯ್ಕೆ

0

ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ದಯಾನಂದ ಕಟ್ಟತ್ತಾರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
5 ಮಂದಿ ಸದಸ್ಯರ ಅವಧಿ ಮುಗಿದಿದ್ದು ಇತ್ತೀಚೆಗೆ ನಡೆದ ಎಸ್.ಡಿ.ಎಂ.ಸಿ.ಸಭೆಯಲ್ಲಿ ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆ ನಡೆಯಿತು.


ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕ ಸೂಫಿ ಪೆರಾಜೆ ಕಾರ್ಯನಿರ್ವಹಿಸುವರು.
ಸದಸ್ಯರಾಗಿ ಶ್ರೀಮತಿ ವಿಮಲ ಕೈವಲ್ತಡ್ಕ,ಗುಣಪಾಲ,ಶ್ರೀಮತಿ ಸುಮಯ್ಯ ದರ್ಖಾಸ್ತು, ಶ್ರೀಮತಿ ಸುಮಿತ್ರ, ಧನಂಜಯ ಎಂ., ಶಿವ ಬಾಲನ್, ಶ್ರೀಮತಿ ಸುಜಾತ ದರ್ಕಾಸ್ತು, ಈಶ್ವರ ನಾಯ್ಕ ಆಯ್ಕೆಯಾದರು.