ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ
ಗುತ್ತಿಗಾರು ಲಯನ್ಸ್ ಕ್ಲಬ್ ಮತ್ತು ಅರಣ್ಯ ಇಲಾಖೆ ಪಂಜ ವಲಯ ಇದರ ಆಶ್ರಯದಲ್ಲಿ ವನಮಹೋತ್ಸವ ಹಾಗೂ ಹಣ್ಣಿನ ಗಿಡಗಳ ವಿತರಣೆ ಮತ್ತು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಆ.10 ರಂದು ವಳಲಂಬೆ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪಂಜ ವಲಯಾರಣ್ಯಾಧಿಕಾರಿ ಸಂತೋಷ ರೈ ನೆರವೇರಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಲ|ಕುಶಾಲಪ್ಪ ತುಂಬತ್ತಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಲಯನ್ಸ್ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಅತಿಥಿಗಳಾಗಿ ಗುತ್ತಿಗಾರು ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಗ್ರಾ.ಪಂ.ಸದಸ್ಯ ವೆಂಕಟ್ ವಳಲಂಬೆ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಮೀಳ ಪಿ. ಎಸ್., ಎಸ್.ಡಿ.ಎಂ.ಸಿ. ಅಧ್ಯಕ್ಷ ರವೀಶ ಕುಮಾರ್, ಮೊಟ್ಟೆ ಮನೆ, ಹಿರಿಯ ವಿದ್ಯಾರ್ಥಿ ಸಂಘದ ಗೋಪಾಲಕೃಷ್ಣ ಪುರ್ಲುಮಕ್ಕಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಸದಸ್ಯರು, ಅಂಗನವಾಡಿ . ಸಮವಸ್ತ್ರ ವನ್ನು ಲ। ನಾಗೇಶ ಪಾರೆಪ್ಪಾಡಿ ಮತ್ತು ಮನೆಯವರು ಸಸ್ಯದ ಪ್ರಾಯೋಜಕರಾಗಿ ಲ| ಕೆ.ಯಂ ಜಾರ್ಜ್ ಗುತ್ತಿಗಾರು ಕೊಡುಗೆಯಾಗಿ ನೀಡಿದ್ದಾರೆ.
ಲಯನ್ಸ್ ಕಾರ್ಯದರ್ಶಿ ಲ। ವೆಂಕಪ್ಪ ಕೇನಾಜೆ ಸ್ವಾಗತಿಸಿ, ಕ್ಲಬ್ ನ ಖಜಾಂಜಿ ಲ। ಮಣಿಯಾನ ಪುರುಷೋತ್ತಮ ವಂದಿಸಿದರು.