ನವೀನ್ ಮಾವಜಿ ನಿರ್ಮಾಣದ ಮಂಡೆಕೋಲು ಪುರವಾಸ ವಿಷ್ಣುಮೂರ್ತಿ ದೇವರ ಕುರಿತ ಕನ್ನಡ ಭಕ್ತಿಗೀತೆಗೆ ಮುಹೂರ್ತ

0

ಬಹರೈನ್ ನಲ್ಲಿ ಉದ್ಯೋಗಿಯಾಗಿರುವ ಮಂಡೆಕೋಲು ಗ್ರಾಮದ ನವೀನ್ ಮಾವಜಿ ನಿರ್ಮಾಣದಲ್ಲಿ, ತುಳುನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನದ ವತಿಯಿಂದ ಮಂಡೆಕೋಲು ಪುರವಾಸನಾಗಿರುವ” ವಿಷ್ಣುಮೂರ್ತಿ ಕನ್ನಡ ಭಕ್ತಿಗೀತೆಗಳು” ಸಿದ್ಧಗೊಳ್ಳಲಿದ್ದು ಇದಕ್ಕೆ ಮುಹೂರ್ತ ಆ.11ರಂದು ಮಂಡೆಕೋಲಿನ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಅರ್ಚಕರು ಉಲ್ಲಾಸ್ ಪಾಂಗಣಾಯ ಪ್ರಾರ್ಥನೆ ಮಾಡಿ ಪ್ರಸಾದ ವಿತರಣೆ ಮಾಡಿದರು.ತುಳುವ ಬೊಳ್ಳಿ ದಯಾನಂದ ಕತ್ತಲ್ ಸಾರ್ ಸಾಹಿತ್ಯ ನೀಡಿದ್ದು, ಗಾಯಕ ಜಗದೀಶ್ ಆಚಾರ್ಯ ಪುತ್ತೂರು ಸಂಗೀತ ನಿರ್ದೇಶಿಸಿ, ಗಾಯನ ಮಾಡಲಿದ್ದಾರೆ. ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಕೇಶವ ಮೂರ್ತಿ ಹೆಬ್ಬಾರ್, ವಿನುತಾ ಹರೀಶ್ಚಂದ್ರ ಪಾತಿಕಲ್ಲು, ನವೀನ್ ಮಾವಜಿ ಅವರ ಮಾತೃಶ್ರೀ ಅನಸೂಯ, ನವೀನ್ ಮಾವಜಿ , ಕಾವ್ಯಶ್ರೀ ನವೀನ್, ಬೇ ಬಿ ಸ್ವಾನಿ, ಕುಟುಂಬದವರು , ಕಛೇರಿ ಸಹಾಯಕ ನಾರಾಯಣ ಗೌಡ ಮೊದಲಾದವರು ಉಪಸ್ಥಿತರಿದ್ದರು.