ಜಟ್ಟಿಪಳ್ಳ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆಗಳು

0

ಮದ್ರಸ ಅದ್ಯಾಪಕ ಒಕ್ಕೂಟ ಎಸ್ ಜೆ ಎಂ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯಾದ್ಯಂತ ಕಾರ್ಯಾಚರಿಸುತ್ತಿರುವ ಮದ್ರಸಗಳಲ್ಲಿ ದೇಶದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆ ಏರ್ಪಡಿಸಲು ಸುತ್ತೋಲೆ ನೀಡಿದ್ದು,ಅದರಂತೆ ಹಯಾತುಲ್ ಇಸ್ಲಾಂ ಕಮಿಟಿ ರಿ. ಜಟ್ಟಿಪಳ್ಳ ಇದರ ಬುಸ್ತಾನುಲ್ ಉಲೂಂ ಮದ್ರಸದಲ್ಲಿ ವೈವಿಧ್ಯ ಸ್ಪರ್ಧೆಗಳು ಆಯೋಜಿಸಲಾಯಿತು.

ರಾಷ್ಟ್ರ ಧ್ವಜ,ಭಾರತದ ಭೂಪಟ ರಚಿಸುವುದು,ಕ್ವಿಝ್,ಸ್ವಾಂತ್ರತ್ಯ ಹೋರಾಟಗಾರರು ಎಂಬ ವಿಷಯದಲ್ಲಿ ಪ್ರಬಂದ ಮುಂತಾದ ಸ್ಪರ್ಧೆಗಳು ಏರ್ಪಡಿಸಲಾಯಿತು. ಈ ಮೂಲಕ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಬೆಳಸುವ,ಹಾಗೂ ಸ್ವಾತಂತ್ರ್ಯದ ಸಂದೇಶ ತಲುಪಿಸಲು ಸಾಧ್ಯವಾಗಲಿದೆ.ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಈ ಬಗ್ಗೆ ಮಾಹಿತಿಗಳನ್ನು ವಿವರಿಸಿ ಅಧ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿ ಸಹಕರಿಸಿದರು.