ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ ದಸರಾ -2024

0

ಸುಳ್ಯ ನಗರದ ವಾರ್ಡ್ ವಾರು ಸಮಿತಿ ರಚನೆ

ಬೂಡು – ಬಿಡಿಒ – ಜಟ್ಟಿಪಳ್ಳ ವಾರ್ಡ್ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಸುಳ್ಯದ ನಾಡಹಬ್ಬ 53ನೇ ವರ್ಷದ ಶ್ರೀ ಶಾರದಾಂಬ ದಸರಾ ಕಾರ್ಯಕ್ರಮದ ಅಂಗವಾಗಿ ಸುಳ್ಯ ನಗರದ ಎಲ್ಲಾ ಇಪ್ಪತ್ತು ವಾರ್ಡ್ ಗಳಲ್ಲಿ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದ್ದು, ಬೂಡು, ಬಿ.ಡಿ.ಒ. ಮತ್ತು ಜಟ್ಟಿಪಳ್ಳ ವಾರ್ಡ್ ಸಮಿತಿಯನ್ನು ರಚಿಸಲಾಯಿತು.

ಬೂಡು ವಾರ್ಡ್

ಬೂಡು ಸಮಿತಿ ರಚನಾ ಸಭೆಯು ಭಗವತಿ ಕ್ಷೇತ್ರದಲ್ಲಿ ನಡೆಯಿತು. ವಾರ್ಡ್ ಸಮಿತಿ ಅಧ್ಯಕ್ಷರಾಗಿ ಮಹಾಬಲ ರೈ ಬೂಡು, ಕಾರ್ಯದರ್ಶಿಯಾಗಿ ಪ್ರದೀಪ್ ಬೂಡು, ಸಂಚಾಲಕರಾಗಿ ಕುಸುಮಾಧರ ಬೂಡು ಆಯ್ಕೆಯಾದರು. ಜೊತೆಗೆ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ಬಿ.ಡಿ.ಒ. ವಾರ್ಡ್

ಬಿ.ಡಿ.ಒ. ವಾರ್ಡಿನ ಸಭೆಯು ಶ್ರೀ ಚೆನ್ನಕೇಶವ ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್, ಕಾರ್ಯದರ್ಶಿಯಾಗಿ ಉಷಾ ಶೆಟ್ಟಿ, ಸಂಚಾಲಕರಾಗಿ ಪ್ರವೀಣ್ ಪ್ರಕಾಶ್ ಅವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ಜಟ್ಟಿಪಳ್ಳ ವಾರ್ಡ್

ಜಟ್ಟಿಪಳ್ಳ ವಾರ್ಡಿನ ರಚನಾ ಸಮಿತಿ ಸಭೆಯು ರಾಜೇಶ್ ರೈ ಅವರ ಮನೆಯಲ್ಲಿ ಜರುಗಿತು.
ಅಧ್ಯಕ್ಷರಾಗಿ ವಾರ್ಡ್ ಸದಸ್ಯರಾದ ಶ್ರೀಮತಿ ಸರೋಜಿನಿ ಪೆಲ್ತಡ್ಕ, ಕಾರ್ಯದರ್ಶಿಯಾಗಿ ಅರ್ಚನಾ ರೈ, ಸಂಚಾಲಕರಾಗಿ ರಘುನಾಥ ಜಟ್ಟಿಪಳ್ಳ ಆಯ್ಕೆಯಾದರು. ಮತ್ತು ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶಾರದಾಂಬ ದಸರಾ ಉತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.