ಪಂಜ :ಅಳ್ಪೆ-ಚಿಂಗಾಣಿಗುಡ್ಡೆ ದೈವಸ್ಥಾನದ ಗೌರವಾಧ್ಯಕ್ಷ,ಪ್ರಧಾನ ಪರಿಚಾರಕ ದಿ.ಜತ್ತಪ್ಪ ಗೌಡ ಕೋಡಿ ರವರಿಗೆ ನುಡಿನಮನ

0

ಕೋಡಿ ಜತ್ತಪ್ಪ ಗೌಡರು ಅಜಾತಶತ್ರು: ಆನಂದ ಗೌಡ ಕಂಬಳ

ಜತ್ತಪ್ಪ ಗೌಡರು ದೇವರಿಗೆ ಸಮಾನ : ಗುರುಪ್ರಸಾದ್ ತೋಟ

ಕಟ್ಟುಪಾಡುಗಳನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ: ಚಂದ್ರಶೇಖರ ಕೋಡಿ

ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು-ಉಳ್ಳಾಲ್ತಿ,ಮಹಿಷಂತಾಯ ದೈವಸ್ಥಾನದ ಗೌರವಾಧ್ಯಕ್ಷರಾಗಿ, ದೈವಸ್ಥಾನದಲ್ಲಿ ಪ್ರಧಾನ ಪರಿಚಾರಕರಾಗಿ , ಊರು ಗೌಡರಾಗಿ ಸುಧೀರ್ಘ ಸೇವೆ ಸಲ್ಲಿಸಿ ಜು.30 ರಂದು ನಿಧನರಾದ ಕೋಡಿ ಜತ್ತಪ್ಪ ಗೌಡ ರವರಿಗೆ ವೈಕುಂಠ ಸಮಾರಾಧನೆ -ನುಡಿನಮನ ಕಾರ್ಯಕ್ರಮ ಆ‌11.ರಂದು ನಡ್ಕ ಶಿವ ಗೌರಿ ಕಲಾಮಂದಿರದಲ್ಲಿ ನಡೆಯಿತು.

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪೂರ್ವಾಧ್ಯಕ್ಷ ಆನಂದ ಗೌಡ ಕಂಬಳ ನುಡಿನಮನ ಸಲ್ಲಿಸಿ “ಅವರು ಊರ ಗೌಡರಾಗಿ ಊರಿನಲ್ಲಿ ಎಲ್ಲಾ ಬಹಳಷ್ಟು ನಿಷ್ಠೆಯಿಂದ ಪ್ರೀತಿಯಿಂದ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದರು. ದೈವಸ್ಥಾನದ ಪ್ರಧಾನ ಪರಿಚಾರಕರಾಗಿ, ಆಡಳಿತ ಮಂಡಳಿಯಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿ ಸಜ್ಜನ, ಅಜಾತಶತ್ರುವಾಗಿ ಸಾರ್ಥಕ ಜೀವನ ನಡೆಸಿದ್ದಾರೆ.” ಎಂದು ಹೇಳಿದರು.

ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಗುರುಪ್ರಸಾದ್ ತೋಟ ನುಡಿ ನಮನ ಸಲ್ಲಿಸಿ
“ಅಳ್ಪೆ -ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು -ಉಳ್ಳಾಲ್ತಿ , ಮಹಿಷಂತಾಯ ದೈವಸ್ಥಾನದ ಸಂಪೂರ್ಣ ಜವಾಬ್ದಾರಿ ವಹಿಸಿ ಕೊಂಡು ಮುನ್ನಡೆಸಿದ್ದಾರೆ. ದೈವದ ಪ್ರಧಾನ ಪರಿಚಾರಕರಾಗಿ ಕಟ್ಟುಪಾಡುಗಳನ್ನು ನಿಷ್ಠೆಯಿಂದ,ಊರ ಗೌಡರಾಗಿ ನಿಷ್ಠೆ ಯಿಂದ ಮಾಡಿಕೊಂಡು ಬಂದವರು ದಿವಂಗತ ಜತ್ತಪ್ಪ ಗೌಡರು.
ದೈವರಾಧನೆ ,ಪರಿಚಾರಕರಾಗಿ ಅಪಾರವಾದ ದೈವ ಭಕ್ತಿಯನ್ನು ಹೊಂದಿದ್ದು ,ಹಿಂದಿನ ಕಟ್ಟು ಪಾಡುಗಳನ್ನು ಚಾಚು ತಪ್ಪದೆ ಪಾಲಿಸಿಕೊಂಡು ಅವರು ಸುಮಾರು 45 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.ಊರಿಗಾಗಿ ತನ್ನ ಜೀವನವನ್ನು ಧಾರೆಯೆರೆದಿದ್ದಾರೆ. ಅವರು ದೇವರಿಗೆ ಸಮಾನರು. ಅವರ ಆದರ್ಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿ ಕೊಳ್ಳ ಬೇಕು ಎಂದು ಹೇಳಿದರು.

ಅವರ ಪುತ್ರ ಚಂದ್ರಶೇಖರ ಕೋಡಿ ನುಡಿ ನಮನ ಸಲ್ಲಿಸಿ “ಅವರು ಮನೆಯಲ್ಲಿ ಎಲ್ಲರನ್ನೂ ‌ಪ್ರೀತಿಯಿಂದ ಕಾಣುತ್ತಿದ್ದರು. ಅಳ್ಪೆ ಕೋಡಿ ಕುಟುಂಬದ ತರವಾಡು ಮನೆಯ ಯಜಮಾನನಾಗಿ,ಊರ ಗೌಡರಾಗಿ ಬೇರೆ ಊರುಗಳಿಗೆ ಹೋದಾಗ ಎಲ್ಲೂ ನಮ್ಮೂರಿನ ಕಟ್ಟುಪಾಡುಗಳನ್ನು ಬಿಟ್ಟು ಕೊಟ್ಟಿರಲಿಲ್ಲ. ಶ್ರೀ ಉಳ್ಳಾಕುಲು -ಉಳ್ಳಾಲ್ತಿ, ಮಹಿಷಂತಾಯ ದೈವಗಳ ಪ್ರಧಾನ ಪರಿಚಾರಕರಾಗಿ ಅಜಾತಶತ್ರುವಾಗಿದ್ದರು”. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಿ.ಜತ್ತಪ್ಪ ಗೌಡರ
ಪತ್ನಿ ಶ್ರೀಮತಿ ಶೇಷಮ್ಮ, ಪುತ್ರರಾದ ಚಂದ್ರಶೇಖರ, ಶಿವರಾಮ, ಧರ್ಮಪಾಲ, ಸದಾನಂದ, ಪುತ್ರಿಯರಾದ ಶ್ರೀಮತಿ ದುರ್ಗಾಶ್ರೀ, ಶ್ರೀಮತಿ ಭವಾನಿ ,ಶ್ರೀಮತಿ ರೂಪ, ಸೊಸೆಯಂದಿರಾದ ಶ್ರೀಮತಿ ಸವಿತಾ , ಶ್ರೀಮತಿ ಜ್ಯೋತಿ , ಶ್ರೀಮತಿ ರೇಣುಕಾ , ಶ್ರೀಮತಿ ಸೌಮ್ಯ ,ಅಳಿಯಂದಿರಾದ ಬೆಳ್ಯಪ್ಪ ಕುಜುಂಬಾರು, ವಸಂತ ಗೌಡ ಮಿತ್ತಡ್ಕ, ಸರ್ವೇಶ್ ಮುಗೆರೋಡಿ, ಮೊಮ್ಮಕ್ಕಳು,ಕುಟುಂಬಸ್ಥರು, ನೆಂಟರಿಷ್ಟರು ,ಅಪಾರ ಬಂಧು ಮಿತ್ರರು ಪಾಲ್ಗೊಂಡು ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಪ್ರಸಿದ್ಧ ಕಲಾವಿದರಿಂದ ಗಾನ ವೈಭವ ಮೂಲಕ ಮೃತರಿಗೆ ನುಡಿನಮನ ನಡೆಯಿತು.
ಗುರುಪ್ರಸಾದ್ ತೋಟ ಸ್ವಾಗತಿಸಿದರು ಮತ್ತು ವಂದಿಸಿದರು.