ಆ. 25 ರಂದು ಕೊಡಗು ಸಂಪಾಜೆ ಪಯಸ್ವಿನಿ ಯುವಕ ಸಂಘದ ಪ್ರಥಮ ವರ್ಷದ ಕೆಸರುಗದ್ದೆ ಗ್ರಾಮೀಣ ಕ್ರೀಡಾ ಕೂಟ

0

ನೆಹರೂ ಯುವ ಕೇಂದ್ರ ಕೊಡಗು ಜಿಲ್ಲೆ ಮಡಿಕೇರಿ ( ಯುವ ಜನ ವ್ಯವಹಾರ ಹಾಗೂ ಕ್ರೀಡಾ ಕೂಟ ಸಚಿವಾಲಯ ಜಿಲ್ಲಾ ಯುವ ಒಕ್ಕೂಟ ಮಡಿಕೇರಿ ಮತ್ತು ಪಯಸ್ವಿನಿ ಯುವ ಸಂಘ (ರಿ ) ಸಂಪಾಜೆ ಸಂಯುಕ್ತ ಆಶ್ರಯದಲ್ಲಿ 2024-25 ನೇ ಪ್ರಥಮ ವರ್ಷದ ಅದ್ಧೂರಿಯ ಕೆಸರು ಗದ್ದೆ ಕ್ರೀಡಾಕೂಟ (ಆ 25) ರಂದು ನಡೆಯಲಿದೆ .

ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯ ಕೀ ಲಾರು ಗದ್ದೆಯಲ್ಲಿ ನಡೆಯಲಿದ್ದು, ಪೂರ್ವಸಿದ್ಧತೆ ಭರದಿಂದ ಸಾಗುತ್ತಿದೆ. ಹಾಗೂ ಮಹಿಳೆಯರ, ಪುರುಷರ ಹಗ್ಗಜಗ್ಗಾಟ , ವಾಲಿಬಾಲ್ , ಕೆಸರುಗದ್ದೆ ಓಟ, ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ ಎಂದು ಅಧ್ಯಕ್ಷರು ಸರ್ವಸದಸ್ಯರು ತಿಳಿಸಿದ್ದಾರೆ.