ಸುಳ್ಯ: ಸಾರ್ವಜನಿಕರಿಂದ ಶಾಸಕಿ ಭಾಗೀರಥಿ ಮುರುಳ್ಯರಿಗೆ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಕೆ

0

ಸುಳ್ಯ ತಾಲೂಕಿನ ಗ್ರಾಮದಲ್ಲಿ ಆಗಬೇಕಾದ ವಿವಿಧ ಬೇಡಿಕೆ ಮತ್ತು ಅಭಿವೃದ್ದಿ ಪಡಿಸುವ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯರಿಗೆ ಸಾರ್ವಜನಿಕರು ತಾಲೂಕು ಪಂಚಾಯತ್ ನ ಶಾಸಕರ ಕಚೇರಿಯಲ್ಲಿ (ಆ 12 ರಂದು) ಮನವಿ ಸಲ್ಲಿಸಿದರು.

ವಿವಿಧ ಕಾಮಗಾರಿಗಳಾದ ರಸ್ತೆ, ಸೇತುವೆ ಅಭಿವೃದ್ಧಿಗೆ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಮೂಡೆಕಲ್ಲು – ಬಾಜಿನಡ್ಕ ಸಂಪರ್ಕ ರಸ್ತೆ ಅಭಿವೃದ್ಧಿ ಇಲ್ಲದೇ ಸಂಚಾರಕ್ಕೆ ಅಡ್ಡಿಯಾಗಿದ್ದು, ಇಲ್ಲಿನ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಆ ಭಾಗದ ಸಾರ್ವಜನಿಕರು ಮನವಿ ಸಲ್ಲಿಸಿದರು. ಮಂಡೆಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗುಂಡ – ಬೆಳ್ಳಿಪ್ಪಾಡಿ ರಸ್ತೆ ಅಭಿವೃದ್ಧಿ ಇಲ್ಲದೇ ದುರಸ್ಥಿ ಆಗದ ಕಾರಣ ವಾಹನ ಸವಾರರಿಗೆ , ಶಾಲಾ ಮಕ್ಕಳಿಗೆ , ಗ್ರಾಮಸ್ಥರಿಗೆ ನಡೆದಾಡಲು ಸಮಸ್ಯೆ ಉಂಟಾಗುತ್ತಿದ್ದು, ಈ ರಸ್ತೆ ಅಭಿವೃದ್ಧಿಗೆ ಅನುದಾನ ಕೋರಿ ಆ ಭಾಗದ ನಾಗರಿಕರು ಶಾಸಕರಿಗೆ ಮನವಿಸಲ್ಲಿಸಲಾಯಿತು. ಬಳಿಕ ಮಂಡೆಕೋಲು ಗ್ರಾಮದ ಬೊಳುಗಲ್ಲು ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಸಂಪರ್ಕ ಸಂವಹನಕ್ಕೆ ಸಮಸ್ಯೆ ಉಂಟಾಗಿದ್ದು, ಇಲ್ಲಿ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬೊಳುಗಲ್ಲು ಭಾಗದ ಸಾರ್ವಜನಿಕರು ಮನವಿ ,ಜಾಲ್ಸೂರು ಗ್ರಾಮದ ಬೈದೆರೆಕೊಳಂಜಿ ಎಂಬಲ್ಲಿ ಸೇತುವೆ ನಿರ್ಮಿಸುವಂತೆ ನಾಗರಿಕರು ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಗಳನ್ನು ಸ್ವೀಕರಿಸಿದ ಶಾಸಕರು ಪರಿಶೀಲನೆ ನಡೆಸಿ, ಹಂತ ಹಂತವಾಗಿ ಸರಕಾರದಿಂದ ಅನುದಾನ ತರಿಸಿ ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಪ್ರಮುಖರಾದ ಸಂತೋಷ್ ಜಾಕೆ, ಬಾಲಕೃಷ್ಣ ಕೀಲಾಡಿ, ಸುಭಾಷ್ ಶೆಟ್ಟಿ ಮೇನಾಲ, ಸೇರಿದಂತೆ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.