ಪೆರಾಜೆ ಗ್ರಾಮ ಸಭೆ ಕುರಿತು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಪೆರಾಜೆಯ ಮನು ಪೆರುಮುಂಡರವರು ಸ್ಪಷ್ಟನೆ ನೀಡಿದ್ದಾರೆ.
ದೊಡ್ಡಡ್ಕ ರಸ್ತೆಯನ್ನು ಡೈವರ್ಟ್ ಮಾಡಿದ್ದಾರೆ ಎಂಬ ಕುರಿತು ನಮ್ಮ ಶಾಸಕರ ಬಗ್ಗೆ ಗ್ರಾಮಸಭೆಯಲ್ಲಿ ಆರೋಪ ಬಂದಾಗ, ಇದನ್ನು ಶಾಸಕರು ಮಾಡಿದ್ದಲ್ಲ. ಅಧಿಕಾರಿಗಳು ಮಾಡಿದ್ದಾರೆ. ಕಾರಣ ಆ ರಸ್ತೆ ಜಿ.ಪಂ. ವ್ಯಾಪ್ತಿಗೆ ಒಳಪಟ್ಟಿಲ್ಲದಿರುವುದರಿಂದ ಮ್ಯಾಪಿಂಗ್ ಮಾಡಿಕೊಂಡು ಕೆಲಸ ಮಾಡಿರುವುದು ಕಾನೂಬು ರೀತಿಯಲ್ಲೇ ಮಾಡಿದ್ದಾರೆ ಎಂದು ಹೇಳಿದ್ದೇನೆ. ಆಗ ನಾಗೇಶ ಕುಂದಲ್ಪಾಡಿಯವರು ಆ ರಸ್ತೆಯನ್ನು ಅರ್ಧಂಬರ್ಧ ಮಾಡಿದ್ದಾರೆ. ನಾಯಿ ತಿಂದ ಹಾಗೆ ಮಾಡಲಾಗಿದೆ ಎಂದು ಹೇಳಿದಾಗ, ನೀವು ರಾಜಕೀಯವಾಗಿ ಆರೋಪ ಮಾಡುತ್ತಿದ್ದೀರಿ. ಆ ಕೆಲಸವನ್ನು ಅಷ್ಟು ಕೀಲಾಗಿ ಕಾಣುವುದು ಬೇಡ. ಕಾಮಗಾರಿ ಇನ್ನೂ ಪ್ರಗತಿಯ ಹಂತದಲ್ಲಿದೆ. ಪೂರ್ತಿ ಮುಗಿಯುವ ಮೊದಲೇ ಜಡ್ಜ್ ಮೆಂಟ್ ಕೊಡುವುದು ಸರಿಯಲ್ಲ ಎಂದು ಹೇಳಿದ್ದೇನೆ ಹೊರತು ಪತ್ರಿಕೆಯಲ್ಲಿ ವರದಿಯಾದಂತೆ ರಸ್ತೆ ಕಾಮಗಾರಿ ಕಳಪೆಯಾಗಿಲ್ಲ ಎಂದು ನಾನು ಹೇಳಿದ್ದಲ್ಲ ಎಂದು ಮನು ಪೆರುಮುಂಡ ಸುದ್ದಿಗೆ ಕರೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.