ವಿದ್ಯಾಮಾತಾ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಗಾರ

0

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿಯಲ್ಲಿ ಕೆಎಎಸ್, ಪಿಡಿಓ, ವಿಎಓ, ಬ್ಯಾಂಕಿಂಗ್, ರೈಲ್ವೆ ಮುಂತಾದ ಅನೇಕ ಸರಕಾರಿ ಹುದ್ದೆಗಳ ಪೂರ್ವ ತಯಾರಿಯ ಬಗ್ಗೆ ಉಚಿತ ತರಬೇತಿ ಕಾರ್ಯಗಾರ ಇತ್ತೀಚೆಗೆ ಅಕಾಡೆಮಿಯ ಆವರಣದಲ್ಲಿ ನಡೆಯಿತು.


ಪುತ್ತೂರು ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಹಾಗೂ ಚಿಕ್ಕಬಳ್ಳಾಪುರದ ಖ್ಯಾತ ತರಬೇತುದಾರ ರಘುನಾಥ್ ಉಚಿತ ಕಾರ್ಯಗಾರ ನಡೆಸಿಕೊಟ್ಟರು. ಮೂಲತಃ ಚಿಕ್ಕಬಳ್ಳಾಪುರದವರೇ ಆದ ಪುತ್ತೂರು ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಅವರು ಬಾಲ್ಯದಲ್ಲಿ ಬಡತನದ ಜೀವನವನ್ನು ನಡೆಸಿ, ಸರಕಾರಿ ಉದ್ಯೋಗದ ಕನಸನ್ನು ನನಸಾಗಿಸಿಕೊಂಡು ತಾನು ಹಾಗೂ ತನ್ನ ಕುಟುಂಬದ ಭದ್ರ ಜೀವನಕ್ಕೆ ಸರಕಾರಿ ಉದ್ಯೋಗದ ಅವಶ್ಯಕತೆಯನ್ನು ತನ್ನ ಅನುಭವಗಳ ಜೊತೆ ಕಾರ್ಯಗಾರದಲ್ಲಿ ಹಂಚಿಕೊಂಡರು.


ಸುಮಾರು 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಕೆಎಎಸ್, ಪಿ ಡಿ ಓ ಮುಂತಾದ ಸರಕಾರಿ ಅಧಿಕಾರಿಗಳಾಗಲು ಕಾರಣಕರ್ತರಾದ ರಘುನಾಥ್ ರವರು ಕೂಡ ವಿದ್ಯಾರ್ಥಿಗಳಿಗೆ ಹಲವು ರೀತಿಯ ಮಾಹಿತಿಯನ್ನು ನೀಡಿ , ಸರ್ಕಾರಿ ಹುದ್ದೆಯನ್ನು ಏರುವಂತೆ ಪ್ರೋತ್ಸಾಹಿಸಿದ ಇವರು , ಪ್ರಸ್ತುತ ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರೂ ಕೂಡ.

ಉಚಿತ ಕಾರ್ಯಗಾರದಲ್ಲಿ 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿ , ಶಿಬಿರದ ಪ್ರಯೋಜನ ಪಡೆದುಕೊಂಡರು. ವಿದ್ಯಾಮಾತಾದ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಅತಿಥಿಗಳನ್ನು ಗೌರವಿಸಿದರು.


ಈ ಸಂದರ್ಭದಲ್ಲಿ ಅಕಾಡೆಮಿಯ ತರಬೇತಿದಾರರು ಸಿಬ್ಬಂದಿ ವರ್ಗದವರು ಹಾಜರಿದ್ದರು.