ಕೊಡಗು ಅರಣ್ಯ ವೃತ್ತ ಮಡಿಕೇರಿ ವಿಭಾಗ , ಸಂಪಾಜೆ ವಲಯದ ರಾಷ್ಟ್ರೀಯ ಜೇನು ನೊಣ ದಿನದ ಅಂಗವಾಗಿ ಅರಣ್ಯ ಇಲಾಖೆಯ ವತಿಯಿಂದ ಕೊಡಗು ವೃತ್ತ ಮಟ್ಟದ ಜೇನು ಕೃಷಿಕರು ಹಾಗೂ ಸಾರ್ವಜನಿಕರಿಗೆ ಸಾಮರ್ಥ್ಯವರ್ಧನೆ ಮತ್ತು ಸಮನ್ವಯ ಕಾರ್ಯಾಗಾರವು ಸಂಪಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆ.13ರಂದು ಜರುಗಿತು.
ಕಾರ್ಯಕ್ರಮವನ್ನು ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಎ.ಸಿ.ಎಫ್. ಮೊಯ್ದೀನ್ ಪಾಷಾ ಅವರು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂಪಾಜೆ ವಲಯಾರಣ್ಯಾಧಿಕಾರಿ ಶ್ರೀಮತಿ ದೇಚಮ್ಮ, ಕೊ.ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ, ಮಡಿಕೇರಿ ಕೃಷಿ ಅಧಿಕಾರಿ ವರದರಾಜು ಎಂ.ವಿ., ಅರಣ್ಯ ಜೀವಶಾಸ್ತ್ರ ಮತ್ತು ವೃಕ್ಷಾಭಿವೃದ್ಧಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಆರ್. ಎನ್. ಕೆಂಚರೆಡ್ಡಿ, ನೆಹರೂ ಸ್ಮಾರಕ ಕಾಲೇಜಿನ ಉಪನ್ಯಾಸಕ ಸಂಜೀವ ಕುದ್ಪಾಜೆ, ಸಂಪಾಜೆ ಸ.ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಾವಿತ್ರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೇನು ಕೃಷಿಕರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ವಲಯಾರಣ್ಯಾಧಿಕಾರಿ ಶ್ರೀಮತಿ ದೇಚಮ್ಮ ಅವರು ಸ್ವಾಗತಿಸಿ, ಅರಣ್ಯ ರಕ್ಷಕ ವಿಜಯೇಂದ್ರ ಅವರು ವಂದಿಸಿದರು.