ಕಾಲೇಜಿಂದ ಚೆನ್ನಕೇಶವ ವೃತ್ತದ ವರೆಗೆ ಪಥಸಂಚಲನ
ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ಮೇರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ತಿರಂಗಾ ಅಭಿಯಾನ ನಡೆಸುವಂತೆ ಆದೇಶ ಬಂದಿದ್ದು , ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ಎನ್.ಸಿ.ಸಿ. ಘಟಕದವರು ತಿರಂಗಾ ಪಥ ಸಂಚಲನ ನಡೆಸಿದರು.
ಇಂದು ಮಧ್ಯಾಹ್ನ 12 ಗಂಟೆಗೆ ಕಾಲೇಜಿನಿಂದ ಹೊರಟ ಎನ್.ಸಿ.ಸಿ. ತಂಡ ಚೆನ್ನಕೇಶವ ದೇವಸ್ಥಾನ ಬಳಿಯ ಚೆನ್ನಕೇಶವ ವೃತ್ತಕ್ಕೆ ಒಂದು ಸುತ್ತು ಬಂದು ತಿರುಗಿ ಕಾಲೇಜು ಸೇರಿತು. ದೇಶಕ್ಕೆ ಜಯಕಾರ ಕೂಗುವ ಘೋಷಣೆಗಳನ್ನು ಕೂಗಿದರು.
ಕಾರ್ಯಕ್ರಮಕ್ಕೆ ಗಾಂಧಿ ಚಿಂತನ ವೇದಿಕೆಯ ಸಂಚಾಲಕರಾದ ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್ ರವರು ಚಾಲನೆ ನೀಡಿದರು.
ಪ್ರಾಂಶುಪಾಲ ಡಾ.ಎಂ.ಎಂ.ರುದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರಲ್ಲದೆ, ಮಾದಕ ವ್ಯಸನದಿಂದ ಮುಕ್ತರಾಗುವ ಪ್ರತಿಜ್ಞೆ ಬೋಧಿಸಿದರು. ಎನ್.ಸಿ.ಸಿ. ಅಧಿಕಾರಿ ಸೀತಾರಾಮ ಮಲ್ಲಾರ , ಪೆರೇಡ್ ನೇತೃತ್ವ ವಹಿಸಿದ್ದರು. ಉಪನ್ಯಾಸಕಿ ಶ್ರೀಮತಿ ಮಮತಾ ಪುರುಷೋತ್ತಮ್ ಸ್ವಾಗತಿಸಿ, ವಂದಿಸಿದರು. ಕಾಲೇಜಿನ ಎಲ್ಲ ಉಪನ್ಯಾಸಕರೂ ಉಪಸ್ಥಿತರಿದ್ದರು.