NCC ಇಂಟರ್ ಗ್ರೂಪ್ ತಲ್ ಸೇನಾ ಕ್ಯಾಂಪ್ ನಲ್ಲಿ ಬೊಳಿಯಮಜಲಿನ ದೀಪಿಕಾ ಎಸ್. ನಾಯ್ಕ್ ಅತ್ಯುತ್ತಮ ಸಾಧನೆ

0


ಸುಳ್ಯದ ಜಟ್ಟಿಪಳ್ಳ ಬೊಳಿಯಮಜಲು ನಿವಾಸಿಯಾಗಿರುವ ದೀಪಿಕಾ ಎಸ್ ನಾಯ್ಕ್ NCC 19 ಕರ್ನಾಟಕ ಬಟಾಲಿಯನ್ ಕೆಡೆಟ್ ಇಂಟರ್ ಗ್ರೂಪ್ ತಲ್ ಸೇನಾ ಕ್ಯಾಂಪ್ (ಟಿಎಸ್ ಸಿ)ನ ಫೈಯರಿಂಗ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.
ಕಾರ್ಕಳದ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ನಡೆದ ಟಿಎಸ್ ಸಿ 1, ಶಿವಮೊಗ್ಗದ ಸಹ್ಯಾದ್ರಿ ಆರ್ಟ್ಸ್ ಅಂಡ್ ಕಾಮರ್ಸ್ ಕಾಲೇಜಿನಲ್ಲಿ ನಡೆದ ಟಿಎಸ್ ಸಿ 2 ಹಾಗೂ ಮಂಗಳೂರಿನ ಸುರತ್ಕಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇಂದ್ರದಲ್ಲಿ ನಡೆದ ಟಿಎಸ್ ಸಿ 3, ಕರ್ನಾಟಕ ಸ್ಟೇಟ್ ಓಪನ್ ಯೂನಿವರ್ಸಿಟಿ ಲಿ IGC ರಲ್ಲಿ ದೀಪಿಕಾ ಪಾಲ್ಗೊಂಡಿದ್ದರು.

ದೀಪಿಕಾ ನಾಲ್ಕು ಕ್ಯಾಂಪ್ ಗಳ ತನಕ ತಲುಪಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರು ಫೈಯರಿಂಗ್ ವಿಭಾಗದ ಸ್ನಾಪ್ ಶೂಟಿಂಗ್ ನಲ್ಲಿ ಒಟ್ಟು 50ರಲ್ಲಿ 40 ಅಂಕವನ್ನು ಪಡೆದುಕೊಂಡಿದ್ದರು. ಭವಿಷ್ಯದಲ್ಲಿ ಅವರಿಗೆ ಭಾರತೀಯ ಸೇನೆ ಕನಸು ಇದ್ದು ಅದರತ್ತ ಗಮನ ಹರಿಸಿದ್ದೇನೆ ಎಂದು ಅವರು ತಿಳಿಸಿದರು.

ಸದ್ಯ ಅವರು ಪುತ್ತೂರಿನ ಸೈಂಟ್ ಫಿಲೋಮಿನ ಕಾಲೇಜಿನ ಫೈನಲ್ ಇಯರ್ ಬಿ.ಸಿ.ಎ ವಿದ್ಯಾರ್ಥಿನಿ. ದಿ. ಶುಭಕರ ಎಸ್. ನಾಯ್ಕ್ ಹಾಗೂ ಕಲರ್ಸ್ ಟೈಲರ್ ಸುಳ್ಯ ಇದರ ಮಾಲಕಿ ರಾಜೇಶ್ವರಿ ಎಮ್.ಅವರ ಪುತ್ರಿ ಹಾಗೂ ಧೀರಜ್ ಎಸ್ ಅವರ ಸಹೋದರಿ.