ಪಂಜದಲ್ಲಿ ಅಖಂಡ ಭಾರತ ಸಂಕಲ್ಪ ದಿನ:ಬೃಹತ್ ಪಂಜಿನ ಮೆರವಣಿಗೆ

0

ಪಂಜ ಸಿ ಎ ಬ್ಯಾಂಕ್ ಬಳಿ ತನಕ ಬೃಹತ್ ಮೆರವಣಿಗೆ

⬆️ ಅಖಂಡ ಭಾರತ ಕನಸಲ್ಲ ಸಂಕಲ್ಪ-ಅವಿನಾಶ್ ಕೊಡೆಂಕಿರಿ

ಹಿಂದು ಜಾಗರಣ ವೇದಿಕೆ ಪಂಜ, ಸುಳ್ಯ ತಾಲೂಕು,ಪುತ್ತೂರು ಜಿಲ್ಲೆ
ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜದಲ್ಲಿ ಆ.14 ರಂದು ಬೃಹತ್ ಪಂಜಿನ ಮೆರವಣಿಗೆ ನಡೆಯಿತು.

ಪಂಜ ದೀನ್ ದಯಾಳ್ ವಾಣಿಜ್ಯ ಸಂಕೀರ್ಣದ ಬಳಿ ಬೃಹತ್ ಪಂಜಿನ ಮೆರವಣಿಗೆ ಸಹಕಾರಿ ಧುರೀಣ ಜಾಕೆ ಮಾಧವ ಗೌಡ ಮತ್ತು ವೆಂಕಟೇಶ್ವರ ಜೋಯಿಸ ಹೆಬ್ಬಾರಹಿತ್ಲು ರವರು ಚಾಲನೆ ನೀಡಿದರು.
ಬಳಿಕ ಹಳೆ ಬಸ್ ನಿಲ್ದಾಣದಿಂದ ಸಿ ಎ ಬ್ಯಾಂಕ್ ಬಳಿ ತನಕ ಮೆರವಣಿಗೆ ಸಾಗಿ ಬಂದು ಸಮಾರೋಪ ನಡೆಯಿತು .

ಕಾರ್ಯಕ್ರಮದಲ್ಲಿ ನೆರಿಮೊಗರು ಸರಸ್ವತಿ ವಿದ್ಯಾಮಂದಿರದ ಸ್ಥಾಪಕಾಧ್ಯಕ್ಷ ಅವಿನಾಶ್ ಕೊಡಂಕಿರಿ ದಿಕ್ಸೂಚಿ ಭಾಷಣ ಮಾಡಿ”ಭಾರತದ ಭೂಪಟದಲ್ಲಿ ತೋರಿಸುವ ಪ್ರದೇಶವನ್ನಾದರೂ ಉಳಿಸಿ ಕೊಂಡಿದೆಯ ಎಂದು ಆಲೋಚಿಸ ಬೇಕಾಗಿದೆ.ದೇಶ ಭಕ್ತಿ ಭಾಷಣ, ಪುಸ್ತಕ, ಆಚರಣೆಯಲ್ಲಿ ಇಲ್ಲದಿದ್ದರೆ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅಖಂಡ ಭಾರತ ನಮ್ಮ ಕನಸಲ್ಲ ಸಂಕಲ್ಪ”ಎಂದು ಹೇಳಿದರು.


ಹಿಂದು ಜಾಗರಣ ವೇದಿಕೆ ಪಂಜ ಘಟಕದ ಅಧ್ಯಕ್ಷ ಕಿರಣ್ ನೆಕ್ಕಿಲ ಸಭಾಧ್ಯಕ್ಷತೆ ವಹಿಸಿದ್ದರು. ಹಿಂದು ಜಾಗರಣ ವೇದಿಕೆಯ
ತಾಲೂಕು ಸಂಪರ್ಕ ಪದಾಧಿಕಾರಿ ದಯಾನಂದ ಮೇಲ್ಮನೆ, ವೆಂಕಟೇಶ್ವರ ಜೋಯಿಸ ಹೆಬ್ಬಾರಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಯರಾಮ ಕೋಟ್ಯಯಡ್ಕ ದೇಶ ಭಕ್ತಿ ಗೀತೆ ಹಾಡಿದರು. ಯಕ್ಷಿತ್ ಜಳಕದಹೊಳೆ ಪ್ರತಿಜ್ಞಾ ವಿಧಿ ಬೋಧಿಸಿದರು.ಕಿರಣ್ ನೆಕ್ಕಿಲ ಸ್ವಾಗತಿಸಿದರು.
ಪ್ರಕಾಶ್ ಜಾಕೆ ನಿರೂಪಿಸಿದರು.ಸತೀಶ್ ಪಲ್ಲೋಡಿ ವಂದಿಸಿದರು.