ತೊಡಿಕಾನ ಸ‌.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರೋತ್ಸವ ಸಂಭ್ರಮ

0

ತೊಡಿಕಾನ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ನವೀನ್ ಎ. ಬಿ. ಅವರು ಧ್ವಜಾರೋಹಣಗೈದರು. ಶಾಲಾ ಎಸ್. ಡಿ. ಎಂ. ಸಿ. ಉಪಾಧ್ಯಕ್ಷೆ ಸೌಮ್ಯ ಭಟ್, ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಪಂಜಿಕೋಡಿ, ಶಶಿಧರ ದೊಡ್ಡಕುಮೇರಿ, ಮಾಜಿ ಅಧ್ಯಕ್ಷ ತಿಮ್ಮಯ್ಯ ಮೆತ್ತಡ್ಕ, ಸೇವಾಪ್ರತಿನಿಧಿ ಸುಂದರ ಬಾಜಿನಡ್ಕ, ಗುತ್ತಿಗೆದಾರ ತಿಲಕ್ ರಾಜ್ ಬಾಳೆಕಜೆ, ಎಸ್. ಡಿ. ಎಂ. ಸಿ. ಪದಾಧಿಕಾರಿಗಳು, ಶಾಲಾ ಪೋಷಕರು ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಂದ ಮೆರವಣಿಗೆ, ಸಭಾ ಕಾರ್ಯಕ್ರಮ, ಸನ್ಮಾನ, ದಾನಿಗಳಿಂದ ಕೊಡುಗೆ ಸ್ವೀಕರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.