ಬೆಳ್ಳಾರೆ :ಝಕರಿಯಾ ಜುಮಾ ಮಸೀದಿ ಹಾಗೂ ಮದರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದ್ರಸ ಮತ್ತು ಝಕರಿಯ್ಯಾ ಜುಮಾ ಮಸೀದಿ ವತಿಯಿಂದ 78 ನೇ ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳಿಗ್ಗೆ 7 ಗಂಟೆಗೆ ಬೆಳ್ಳಾರೆ ಪೇಟೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಮುತಅಲ್ಲಿಂಗಳು, ಪೋಷಕರು ಉಸ್ತಾದರು, ಜಮಾಅತ್ ಕಮಿಟಿ ಪದಾಧಿಕಾರಿಗಳು ಒಳಗೊಂಡ ಶಾಂತಿ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ನಂತರ ಮುದರ್ರಿಸರಾದ ನಸೀಹ್ ದಾರಿಮಿ ನೇತೃತ್ವದಲ್ಲಿ ಮಖಾಮ್ ಝಿಯಾರತ್ ನಡೆಯಿತು. ಜಮಾಅತ್ ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಮಂಗಳ ಧ್ವಜಾರೋಹಣ ನೆರವೇರಿಸಿದರು.

ಮದ್ರಸ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಆಲಾಪಿಸಿದರು. ಸದರ್ ಉಸ್ತಾದ್ ಮುಹಮ್ಮದ್ ನವಮಿ ಮುಂಡೋಳೆ ಸಂದೇಶ ಭಾಷಣಗೈದರು. SKSBV ಕಾರ್ಯದರ್ಶಿ ಮುಹಮ್ಮದ್ ಕೈಫ್ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ,ಸುಲೈಮಾನ್ ಮುಸ್ಲಿಯಾರ್, ಝೈನುದ್ದೀನ್ ಮುಸ್ಲಿಯಾರ್, ಹಸೈನಾರ್ ಮುಸ್ಲಿಯಾರ್, ರಫೀಕ್ ಹನೀಫಿ ,ಝಕರಿಯಾ ಮುಸ್ಲಿಯಾರ್, ಶಾಕಿರ್ ಫೈಝಿ ಬಶೀರ್ ಕಲ್ಲಪ್ಪಣೆ, ನಝೀರ್ ಶೂಬಿಝ್ ಅಝ್ಹರುದ್ದೀನ್, ಹಮೀದ್ ಎಚ್ ಎಂ,ಬಶೀರ್ ಕೆ ಎ . ಜಮಾಲುದ್ದೀನ್ ಕೆ ಎಸ್ , ಮುಂತಾದವರು ಉಪಸ್ಥಿತರಿದ್ದರು.

SKSBV ಅಧ್ಯಕ್ಷರಾದ ಶಿಹಾಬುದ್ದೀನ್ ಸ್ವಾಗತಿಸಿ ಮೇನೇಜ್ ಮೆಂಟ್ ಕಾರ್ಯದರ್ಶಿ ಯು.ಪಿ.ಬಶೀರ್ ಬೆಳ್ಳಾರೆ ವಂದಿಸಿದರು.