ಗಾಂಧಿ ಚಿಂತನ ವೇದಿಕೆ ನೇತೃತ್ವ : ಸುಳ್ಯ ನಗರದಲ್ಲಿ ಸ್ವಾತಂತ್ರ್ಯ ನಡಿಗೆ

0

ಏಕಕಾಲದಲ್ಲಿ ಮೂರು ಕಡೆಯಿಂದ ನಡಿಗೆಗೆ ಚಾಲನೆ : ನೂರಾರು ಮಂದಿ ಭಾಗಿ

ಗಾಂಧಿ ಚಿಂತನ ವೇದಿಕೆ ಸುಳ್ಯ, ತಾಲೂಕು ಯುವಜನ ಸಂಯುಕ್ತ ಮಂಡಳಿ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಮತ್ತು ಸುದ್ದಿ ಬಳಗ ಇದರ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸುಳ್ಯ ನಗರದಲ್ಲಿ ಸ್ವಾತಂತ್ರ್ಯ ನಡಿಗೆ ಅದ್ದೂರಿಯಾಗಿ ನಡೆಯಿತು.

ಸುಳ್ಯದ ವಿಷ್ಣು ಸರ್ಕಲ್, ಸುಳ್ಯ ಚೆನ್ನಕೇಶವ ದೇವಸ್ಥಾನ, ಸುಳ್ಯ‌ಜ್ಯೋತಿ ಸರ್ಕಲ್ ಬಳಿಯಿಂದ ಮಧ್ಯಾಹ್ನ 3.30ರ ಸುಮಾರಿಗೆ ಏಕಕಾಲಕ್ಕೆ ನಡಿಗೆ ಆರಂಭಗೊಂಡಿತು.

ನೂರಾರು ಮಂದಿ ಏಕಕಾಲದಲ್ಲಿ 3 ಕಡೆಯಿಂದ ಹೊರಟ ಸ್ವಾತಂತ್ರ್ಯ ನಡಿಗೆ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಬಂದು ಸೇರಿತು.

ಸ್ವಾತಂತ್ರ್ಯ ನಡಿಗೆ ತಲುಪಿದ ಬಳಿಕ ಗಾಯಕ ಕೆ.ಆರ್. ಗೋಪಾಲಕೃಷ್ಣ ಹಾಗೂ ಆರತಿ ಪುರುಷೋತ್ತಮ ಕೇರ್ಪಳ ನೇತೃತ್ವದಲ್ಲಿ ದೇಶ ಭಕ್ತಿ ಗೀತ ಗಾಯನ ನಡೆಯಿತು.

ಬಳಿಕ ಸ್ವಾತಂತ್ರ್ಯ ನಡಿಗೆಯ ಸಮಾರೋಪ ಸಮಾರಂಭ ನಡೆಯಿತು.

ಸ್ವಾತಂತ್ರ್ಯ ನಡಿಗೆಯ ನೇತೃತ್ವ ವಹಿಸಿದ ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ಶಾಸಕಿ ಭಾಗೀರಥಿ ಮುರುಳ್ಯ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರು, ಇ.ಒ. ರಾಜಣ್ಣ, ತಹಶೀಲ್ದಾರ್ ಮಂಜುನಾಥ್ ಜಿ., ಎಸ್.ಐ. ಈರಯ್ಯ ದೂಂತೂರು, ಮಹಿಳಾ ಮಂಡಲ ಒಕ್ಕೂಟಗಳ ಅಧ್ಯಕ್ಷೆ ಶ್ರೀಮತಿ ಮಧುಮತಿ ಬೊಳ್ಳೂರು, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ ವೇದಿಕೆಯಲ್ಲಿದ್ದು ಮಾತನಾಡಿದರು.

ನಿತ್ಯಾನಂದ ನುಂಡೋಡಿ, ಎಂ.ವೆಂಕಪ್ಪ ಗೌಡ, ಎಸ್.ಎನ್. ಮನ್ಮಥ, ಹರೀಶ್ ಕಂಜಿಪಿಲಿ, ದೊಡ್ಡಣ್ಣ ಬರೆಮೇಲು, ಪಿ.ಎಸ್.ಗಂಗಾಧರ್, ಎನ್.ಜಯಪ್ರಕಾಶ್ ರೈ, ಕೆ.ಎಂ.ಮುಸ್ತಫ, ಡಾ.ಲೀಲಾಧರ್ ಡಿ.ವಿ., ಸಿಡಿಪಿಒ ಶೈಲಜಾ ದಿನೇಶ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ನಾರಾತಣ ಕೇಕಡ್ಕ, ಪ್ರೊ.ದಾಮೋದರ ಗೌಡ, ಪಿ.ಸಿ.ಜಯರಾಮ್, ಡಾ.ಎನ್.ಎ. ಜ್ಞಾನೇಶ್, ಸುಕುಮಾರ್ ಕೋಡ್ತುಗುಳಿ, ರಾಜು ಪಂಡಿತ್, ಶಾಫಿ ಕುತ್ತಮೊಟ್ಟೆ, ಗಂಗಾಧರ ಮಟ್ಟಿ, ಬೂಡು ರಾಧಾಕೃಷ್ಣ ರೈ, ಸುನಿಲ್ ಕೇರ್ಪಳ, ರಾಜೇಶ್ ಶೆಟ್ಟಿ ಮೇನಾಲ, ಶರೀಫ್ ಕಂಠಿ, ಶಂಕರ ಪೆರಾಜೆ, ಜತ್ತಪ್ಪ ರೈ ಸುಳ್ಯ, ಚಂದ್ರಶೇಖರ ಅಡ್ಪಂಗಾಯ, ಜನಾರ್ದನ ದೋಳ, ಶೀನಪ್ಪ ಬಯಂಬು, ವಿಜೇಶ್ ಹಿರಿಯಡ್ಕ, ವೀರಪ್ಪ ಗೌಡ ಕಣ್ಕಲ್, ಚಂದ್ರಾವತಿ ಬಡ್ಡಡ್ಕ, ಸುರೇಶ್ ಅಮೈ, ಸತ್ಯಶಾಂತಿ ತ್ಯಾಗ ಮೂರ್ತಿ, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ರಾಧಾಕೃಷ್ಣ ಬೊಳ್ಳೂರು, ಲತಾ ಕುದ್ಪಾಜೆ, ಚಂದ್ರಪ್ರಕಾಶ್ ಕೇರ್ಪಳ, ಸುಳ್ಯದ ವಿವಿಧ ಕಾಲೇಜುಗಳ ಉಪನ್ಯಾಸಕರು, ಬಿಸಿಎಂ, ಸಮಾಜಕಲ್ಯಾಣ ಇಲಾಖೆ ವಿದ್ಯಾರ್ಥಿಗಳು, ಫೋಟೊ ಗ್ರಾಫರ್ಸ್ ಸೇರಿದಂತೆ ಸಂಘ ಸಂಸ್ಥೆಗಳು, ಸುಳ್ಯ‌ನಗರ ಪಂಚಾಯತ್ ಸದಸ್ಯರುಗಳು, ಸೈನಿಕರ ಸಂಘದವರು ಮೊದಲಾದವರು ಇದ್ದರು.

ಲಂಚ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಪ್ರತಿಜ್ಞೆ ಸ್ವೀಕಾರ ನಡೆಯಿತು.