ಐವರ್ನಾಡಿನ ಎಸ್.ಬಿ.ಐ. ಎಟಿಎಂ ವರ್ಕಿಂಗ್ ಇಲ್ಲ…!

0

ಬ್ಯಾಂಕಿನ ಗ್ರಾಹಕರು ಹಣಕ್ಕಾಗಿ ಪರದಾಟ….

ಐವರ್ನಾಡಿನಲ್ಲಿ ಸುಳ್ಯ ಭಾರತೀಯ ಸ್ಟೇಟ್ ಬ್ಯಾಂಕಿನ ಶಾಖೆ ಇದ್ದು ಇಲ್ಲಿರುವ ಎಟಿಎಂ ವರ್ಕಿಂಗ್ ಇಲ್ಲದೆ ಹಲವು ತಿಂಗಳುಗಳೆ ಕಳೆದಿದೆ.
ಗ್ರಾಮದ ಜನರಿಗೆ ಅಲ್ಲದೆ ಪರವೂರಿನಿಂದ ಬರುವ ಗ್ರಾಹಕರಿಗೂ ಇದರಿಂದ ತೊಂದರೆಯಾಗಿದೆ.
ಕೆಲವು ತಿಂಗಳುಗಳ ಹಿಂದೆ ಬ್ಯಾಂಕ್ ಮತ್ತು ಎಟಿಎಂ ಪಂಚಾಯತ್ ಕಟ್ಟಡದಿಂದ ಹೊಸದಾಗಿ ನಿರ್ಮಾಣಗೊಂಡ ನೆಕ್ರೆಪ್ಪಾಡಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡಿತ್ತು.


ಅಲ್ಲಿರುವಾಗಲೇ ಕೆಲವು ದಿನ ಎಟಿಎಂ ಸರಿಯಾಗಿ ವರ್ಕಿಂಗ್ ಆಗದೆ ಇರುತ್ತಿತ್ತು.
ಆದರೆ ಸ್ಥಳಾಂತರಗೊಂಡ ಬಳಿಕ ಇದು ಸರಿಯಾಗಬಹುದೆಂದು ಗ್ರಾಹಕರು ಊಹಿಸಿದ್ದರು.
ಆದರೆ ಈಗ ಎಟಿಎಂ ಕೆಲವು ತಿಂಗಳುಗಳ ಕಾಲ ಮುಚ್ಚಲಾಗಿದ್ದು ಯಾವಾಗ ಸರಿಯಾಗುತ್ತದೋ ಕಾದು ನೋಡಬೇಕಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.