ಕಲ್ಲುಗುಂಡಿ :ಯಶಸ್ವಿ ಯುವಕ ಮಂಡಲ ವತಿಯಿಂದ ಎಸ್.ಎಸ್ ಎಲ್ .ಸಿ ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

0

78 ನೇ ಸ್ವಾತಂತ್ರ್ಯೋತ್ಸವ ದಿನ ಅಂಗವಾಗಿ ಕಲ್ಲುಗುಂಡಿಯ ಯಶಸ್ವಿ ಯುವಕ ಮಂಡಲ (ರಿ) ವತಿಯಿಂದ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸಾಧನೆಗೈದ ಐದು ಮಂದಿ ವಿದ್ಯಾರ್ಥಿಗಳಿಗೆ ಕಲ್ಲುಗುಂಡಿ ಆರ್.ಎಂ.ಎಸ್ ಶಾಲೆಯ ಸಭಾಂಗಣದಲ್ಲಿ (ಆ 15) ರಂದು ಸನ್ಮಾನಿಸಲಾಯಿತು.

2023-24 ನೇ ಸಾಲಿನ ವಿದ್ಯಾರ್ಥಿಗಳಾದ ಮೋಕ್ಷ ಸಿ. ಡಿ, ತೃಪ್ತಿ, ಜಸ್ಮಿತ, ಕ್ಷಮಾ, ಆಶಿತ್ ರವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಈ ವೇಳೆ ಯಶಸ್ವಿ ಯುವಕ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವಸದಸ್ಯರು, ಪೋಷಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.