ಮರ್ಕಂಜ : ನಾಳೆ ರೆಂಜಾಳದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸಂಪಾಜೆ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮರ್ಕಂಜ, ಜನಜಾಗೃತಿ ವೇದಿಕೆ ಮರ್ಕಂಜ, ಜ್ಞಾನವಿಕಾಸ ಕೇಂದ್ರ ಮರ್ಕಂಜ ಹಾಗೂ ಊರವರ ಸಹಕಾರದೊಂದಿಗೆ ಪರಮಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ನಾಳೆ ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವಿನಾಯಕ ಸಭಾಭವನದಲ್ಲಿ‌ ವೇದಮೂರ್ತಿ ಚೈತನ್ಯ ಭಟ್ ಇವರ ಪೌರೋಹಿತ್ಯದಲ್ಲಿ ನಡೆಯಲಿದೆ.

ಬೆಳಿಗ್ಗೆ 8 ಗಂಟೆಗೆ ಸಂಕಲ್ಪ ಹಾಗೂ ಪೂಜಾ ಕಾರ್ಯಕ್ರಮ ಗಳು ಆರಂಭಗೊಳ್ಳಲಿದೆ.

ಮಧ್ಯಾಹ್ನ 11.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಸಭಾಧ್ಯಕ್ಷತೆಯನ್ನು ಸೋಮಶೇಖರ ಪೈಕ ಅಧ್ಯಕ್ಷರು, ಜನಜಾಗೃತಿ ವೇದಿಕೆ ಸಂಪಾಜೆ ವಲಯ ಇವರು ವಹಿಸಲಿದ್ದಾರೆ.

ಹರಿಶ್ ಕಾಂಜಿಪಿಲಿ, ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ ಶ್ರೀ ಕ್ಷೇತ್ರ ರೆಂಜಾಳ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನ ಮಿನುಂಗೂರು ಇವರು ಉದ್ಘಾಟಿಸಲಿದ್ದಾರೆ.

ಧಾರ್ಮಿಕ ಉಪನ್ಯಾಸವನ್ನು ಶ್ರೀಮತಿ ಶ್ರೀದೇವಿ ನಾಗರಾಜ ಭಟ್, ಶ್ರೀ ಕೇಶವಕೃಪಾ ಸುಳ್ಯ ಇವರು ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಧವ ಗೌಡ, ಯೋಜನಾಧಿಕಾರಿಗಳು ಶ್ರೀ ಕ್ಷೆ.ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ, ನಿತ್ಯಾನಂದ ಮುಂಡೋಡಿ, ಮಾಜಿ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪುಟ್ಟಣ್ಣ ಗೌಡ, ಸೇವಾ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ರಾಘವ ಗೌಡ ಕಂಜಿಪಿಲಿ, ನಿಕಟಪೂರ್ವ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಪಂಚಸ್ಥಾಪನೆ ಮರ್ಕಂಜ ಭಾಗವಹಿಸಲಿದ್ದಾರೆ.

ಯುವರಾಜ ಜೈನ್ ಬಲ್ನಾಡುಪೇಟೆ ಮಾಜಿ ಆಡಳಿತ ಮೊಕೇಸರರು, ಪಂಚಸ್ಥಾಪನೆ ಮರ್ಕಂಜ ಶ್ರೀಮತಿ ಗೀತಾ ಹೊಸೊಳಿಕೆ, ಅಧ್ಯಕ್ಷರು, ಗ್ರಾ. ಪಂ. ಮರ್ಕಂಜ, ಸತೀಶ್‌ ರಾವ್ ದಾಸರಬೈಲು ಅಧ್ಯಕ್ಷರು, ಜನಜಾಗೃತಿ ವೇದಿಕೆ ಗ್ರಾಮ ಸಮಿತಿ ಮರ್ಕಂಜ, ಚಿನ್ನಪ್ಪ ಗೌಡ ಬೇರಿಕೆ ಸಂಚಾಲಕರು, ಅನ್ನಪೂರ್ಣ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ಜಗನ್‌ಮೋಹನ ರೈ ರೆಂಜಾಳ ನಿಕಟಪೂರ್ವ ಜನಜಾಗೃತಿ ವಲಯ ಅಧ್ಯಕ್ಷರು ಸಂಪಾಜೆ ವಲಯ, ಶ್ರೀಮತಿ ಸರಸ್ವತಿ ಕಕ್ಕಾಡು, ಅಧ್ಯಕ್ಷರು, ವರಮಹಾಲಕ್ಷ್ಮೀ ಸಮಿತಿ ಮರ್ಕಂಜ, ಗೋಪಾಲಕೃಷ್ಣ ಬಲ್ಕಾಡಿ, ಅಧ್ಯಕ್ಷರು, ಪ್ರಗತಿ ಬಂಧು ಸ್ವ. ಸಂ. ಒಕ್ಕೂಟ ಮರ್ಕಂಜ, ರಾಧಾಕೃಷ್ಣ ಅಂಗಡಿಮಜಲು, ಅಧ್ಯಕ್ಷರು, ಪ್ರಬಂಧು ಸ್ವ ಸಂ. ಒಕ್ಕೂಟದ ಶ್ರೀಮತಿ ಲೀಲಾವತಿ ಸೂಟೆಗದ್ದೆ ಅಧ್ಯಕ್ಷರು, ಪ್ರಬಂಧು ಸ್ವ,ಸಂಘ ಇವರು ಭಾಗವಹಿಸಲಿದ್ದಾರೆ.