ನಡುಗಲ್ಲು ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಆ.15 ರಂದು ವಿಜೃಂಭಣೆಯಿಂದ ಆಚರಿಸಲಾಯಿತು.


ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವರಾಮ ಉತ್ರoಬೆ ಅವರು ಧ್ವಜಾರೋಹಣವನ್ನು ನಡೆಸಿ ಕೊಟ್ಟರು.


ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಸ್ವಾತಂತ್ರ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.


. ಹಿರಿಯ ಶಿಕ್ಷಕಿ ಶ್ರೀಮತಿ ವನಜಾಕ್ಷಿ ಯವರು ಮಾತನಾಡಿ ಸ್ವಾತಂತ್ರದ, ತ್ಯಾಗ ಮನೋಭಾವ, ದೇಶ ಸೇವೆ ಯ ಬಗ್ಗೆ ಅರಿವು ಮೂಡಿಸಿದರು. ಊರ ವಿದ್ಯಾಭಿಮಾನಿಗಳ ಪರವಾಗಿ ಚಂದ್ರಶೇಖರ್ ಬಾಳುಗೋಡು, ವಿನೂಪ್, ಕ್ಯಾಪ್ಟನ್ ಪ್ರಾಂಜಲ್. ಮಾತನಾಡಿದರು. ವೇದಿಕೆಯಲ್ಲಿ ಗ್ರಾ.ಪಂ ಸದಸ್ಯ ವಿಜಯಕುಮಾರ್ ಚಾರ್ಮತ , ಮಾಜಿ ಅಧ್ಯಕ್ಷರಾದ ಶ್ರೀಮತಿ ಉಮೇಶ್ವರಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ
ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿ, ಲಘು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.


ವಿದ್ಯಾರ್ಥಿ ಮೋಹನ್ ದಾಸ ಕೊಡ ಮಾಡಿದ “ಕಂಪಾಸ್ ಬಾಕ್ಸ್ ” ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಹಂಚಲಾಯಿತು.


ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನವರು ತೆರೆದ ಶಾಶ್ವತ ದತ್ತಿನಿಧಿ ಬಡ್ಡಿ ಹಣವನ್ನು 2023-24ರ ಪ್ರತಿ ತರಗತಿಯ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿಗೆ ನೀಡಲಾಯಿತು. ಅದರ ಪಟ್ಟಿಯನ್ನು ಶ್ರೀಮತಿ ಸವಿತಾ ವಾಚಿಸಿದರು. ಸನಾರಂಭದಲ್ಲಿ ಕಿಶೋರ್ ಕುಮಾರ್ ಉತ್ರoಬೆ ಅವರ ತಾಯಿ ದಿl ಶ್ರೀಮತಿ ಬಾಲಕಿ ಅವರ ಸ್ಮರಣಾರ್ಥ ₹5000/ ದತ್ತಿನಿಧಿ ಹಸ್ತಾಂತರಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಪಾರೆಪ್ಪಾಡಿ ಸ್ವಾಗತಿಸಿದರು.


ಕಾರ್ಯಕ್ರಮ ನಿರ್ವಹಣೆಯನ್ನು ಶ್ರೀಮತಿ ಮೋಕ್ಷ ನಡೆಸಿ ಕೊಟ್ಟರು. ಶಿಕ್ಷಕ ಮಹೇಶ್.ಕೆ.ಕೆ ಧನ್ಯವಾದ ಸಮರ್ಪಿಸಿದರು.