ಶ್ರೀ ಗುರು ರಾಯರ 353 ನೇ ವರ್ಷದ ಆರಾಧನಾ ಮಹೋತ್ಸವವುಆ.21 ರಂದು ನಡೆಯಲಿದ್ದು
ಸುಳ್ಯದ ರಾಯರ ಮಠದಲ್ಲಿ ಪಲ್ಲಕ್ಕಿ ಸೇವೆ ,ತೊಟ್ಟಿಲು ಸೇವೆ,ಅಷ್ಟಾವಧಾನ ಸೇವೆಯೊಂದಿಗೆ 8 ನೇ ವರ್ಷದ ಮಹೋತ್ಸವವು ನಡೆಯಲಿರುವುದಾಗಿ ರಾಘವೇಂದ್ರ ಮಠದ ಬೃಂದಾವನ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಯವರು ವಿವರ ನೀಡಿದರು.
ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಆ.17 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವು
ಬೆಳಗ್ಗಿನಿಂದ ಬ್ರಹ್ಮಶ್ರೀ ವೇದಮೂರ್ತಿ ಶ್ರೀಹರಿ ಎಳಚಿತ್ತಾಯರವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ ಹಾಗೂ ಸಂಜೆ ವಿಶೇಷವಾಗಿ ಸ್ಥಳೀಯ ಭಜನಾ ತಂಡದವರಿಂದ ಭಜನಾ ಸೇವೆಯು ಜರುಗಲಿದೆ.
ಮಧ್ಯಾಹ್ನ ಧಾರ್ಮಿಕ ಸಭೆಯು ನಡೆಯಲಿದೆ. ಆರಾಧನಾ ಮಹೋತ್ಸವದ
ಸಂದರ್ಭದಲ್ಲಿ ಭಕ್ತಾದಿಗಳು ಹೊರೆ ಕಾಣಿಕೆತಂದೊಪ್ಪಿಸುವವರು ಆ.20 ರ ಮುಂಚಿತವಾಗಿ ಒಪ್ಪಿಸಬೇಕು. ಮಧ್ಯಾಹ್ನ ಮತ್ತು ರಾತ್ರಿ ಸಮಯದಲ್ಲಿ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆಯ ನಂತರ ಅನ್ನ ಸಂತರ್ಪಣೆಯು ನಡೆಯಲಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಶಿವಳ್ಳಿ ಸಂಪನ್ನದ ಅಧ್ಯಕ್ಷ ಬೃಂದಾವನ ಸೇವಾ ಟ್ರಸ್ಟಿ ರಾಮ್ ಕುಮಾರ್ ಹೆಬ್ಬಾರ್, ಟ್ರಸ್ಟ್ ಕಾರ್ಯದರ್ಶಿ ಗಿರೀಶ್ ಕೇಕುಣ್ಣಾಯ, ಗೌರವ ಸಲಹೆಗಾರ ಗಂಗಾಧರ ಮಟ್ಟಿ ಉಪಸ್ಥಿತರಿದ್ದರು.