ಗುತ್ತಿಗಾರು ಚರ್ಚ್ ನ ಫಾ. ಆದರ್ಶ್ ಜೋಸೆಫ್ ರಿಗೆ ಹ್ಯೂಮನಿಟೀರಿಯನ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ

0

ಗುತ್ತಿಗಾರಿನ ಸೈಂಟ್ ಮೇರೀಸ್ ಚರ್ಚ್ ನ ಫಾ. ಆದರ್ಶ್ ಜೋಸೆಫ್ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಹ್ಯೂಮನಿಟೆರಿಯನ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ಪ್ರದಾನ ಆ.15 ರಂದು ಮಾಡಲಾಯಿತು.

ದೆಹಲಿಯ ಸಂಸ್ಥೆಯಿಂದ ಕೊಡಮಾಡು ಈ ಪ್ರಶಸ್ತಿ
ರಾಷ್ಟ್ರ ಮಟ್ಟದಲ್ಲಿ ನೀಡುವಂತಹ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿಯನ್ನು ದೆಹಲಿಯಲ್ಲಿ ಪ್ರಧಾನ ಮಾಡಲಾಯಿತು.

ಕೇಂದ್ರ ಸರಕಾರದ ಮಾಜಿ ಸಚಿವ ಸಂತೋಷ್ ಬಗ್ರೋಡಿಯಾ ಹಾಗೂ ಕಿರು ತೆರೆ ತಾರೆ ಶ್ರೀ ಸುರೇಂದ್ರ ಪಾಲ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಆದರ್ಶ್ ಅವರು ಸಮಾಜಕ್ಕೆ ನೀಡಿದ ವಿವಿಧ ಸಮಾಜ ಸೇವೆಯನ್ನು ಪರಿಗಣಿಸಿ ಫಾ. ಆದರ್ಶ್ ಜೋಸೆಫ್ ಅವರಿಗ ನೀಡಿ ಗೌರವಿಸಲಾಯಿತ್ತು.
ಕೋವಿಡ್ 19 ರ ಸಂದರ್ಭದಲ್ಲಿ ಗ್ರಾಮ ಮಟ್ಟದಲ್ಲಿ ಮಾಡಿದ ಸಮಾಜಸೇವೆಯನ್ನು ಪರಿಗಣಿಸಿದೆ. ವೈಯುಕ್ತಿಕ ವಾಹನದಲ್ಲಿ ನೂರಕ್ಕೂ ಅಧಿಕ ಕೋವಿಡ್ ರೋಗಿಗಳನ್ನು ಆಸ್ಪತ್ರೆ ಹಾಗೂ ಕೋವಿಡ್ ಸೆಂಟರ್ ಗಳಿಗೆ ಉಚಿತ ವಾಗಿ ರವಾನೆ ಮಾಡುವುದರ ಮೂಲಕ ಹಲವಾರು ಜನರ ಪ್ರಾಣ ಉಳಿಸುವಲ್ಲಿ ಯಶ್ವಸಿಯಾಗಿರುವುದು. ಜಾತಿ, ಧರ್ಮ ವ್ಯೆತ್ಯಾಸವಿಲ್ಲದೆ ಮಾಡುವ ಮಾನವ ಸೇವೆಯನ್ನು ಸಂಸ್ಥೆ ಗುರುತಿಸಿ ಪ್ರಶಸ್ತಿ ಗೆ ಆಯ್ಕೆ ಮಾಡಿದೆ.

ಪ್ರಸ್ತುತ ಆದರ್ಶ್ ಅವರು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಗುತ್ತಿಗಾರು ಹಾಗೂ ನೆಟ್ಟಣ ಚರ್ಚಿನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.