ಜೊತೆಯಾಗಿ ಇಹಲೋಕ ತ್ಯಜಿಸಿದ ಸಹೋದರರು

0

ಮೈಸೂರಿನಲ್ಲಿ ಮುಂಡೋಡಿಯ ಸಹೋದರರಿಬ್ಬರ ಆತ್ಮಹತ್ಯೆ

ಮೈಸೂರಿನಲ್ಲಿ ನೆಲೆಸಿರುವ ಮುಂಡೋಡಿ ಮೂಲದ ಸಹೋದರಿಬ್ಬರು ಆ.15 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಸೂರಿನಲ್ಲಿ ನೆಲೆಸಿದ್ದ ದಿl ಧರ್ಮಪಾಲ ಮುಂಡೋಡಿ ಮತ್ತು ದಿ.l ಪುಷ್ಪಾ ದಂಪತಿಗಳ ಪುತ್ರರಾದ 39 ವರ್ಷ ಪ್ರಾಯದ ನಾಗೇಂದ್ರ ಮುಂಡೋಡಿ ಮತ್ತು 36 ವರ್ಷ ಪ್ರಾಯದ ಸನತ್ ಮುಂಡೋಡಿ ತಮ್ಮ ಮನೆಯಲ್ಲಿ ಮಾನಸಿಕ ಕಿನ್ನತೆಗೊಳಗಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತರ ಅಂತ್ಯ ಸಂಸ್ಕಾರವನ್ನು ಆ.16 ರಂದು ಮೈಸೂರಿನಲ್ಲಿ ನಡೆಸಲಾಯಿತು. ಮೃತರು ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.