ಕೊಡಿಯಾಲಬೈಲಿನಲ್ಲಿ ಪ್ರಥಮ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

ನೂರಾರು ಮಹಿಳೆಯರು ಕಾರ್ಯಕ್ರಮಕ್ಕೆ ಸಾಕ್ಷಿ

0

ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ ನೀಡಿ, ಮುಂದೆ ಉತ್ತಮ ವ್ಯಕ್ತಿಯಾಗಲು ದಾರಿ ತೋರುತ್ತದೆ; ಮಮತ ಮೂಡಿತ್ತಾಯ

ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಕೊಡಿಯಾಲಬೈಲು, ಸುಳ್ಯ ನಗರ ಗೌಡ ಮಹಿಳಾ ಘಟಕ, ವರಮಹಾಲಕ್ಷ್ಮಿ ಯುವತಿ ಮಂಡಲ ಕೊಡಿಯಾಲಬೈಲು ಮತ್ತು ಎಂ.ಜಿ.ಎಂ. ಶಾಲಾ ಪೋಷಕರ ಸಮಿತಿ ಹಾಗೂ ಶ್ರೀ ಮಹಮ್ಮಾಯಿ ಸೇವಾ ಸಮಿತಿ ಇವುಗಳ ಸಹಯೋಗದೊಂದಿಗೆ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ಪ್ರಥಮ ವರ್ಷದ ಸಾಮೂಹಿಕ ಶ್ರಿ ವರಮಹಾಲಕ್ಷ್ಮಿ ಪೂಜೆ ಆ.16 ರಂದು ರಾತ್ರಿ ನಡೆಯಿತು.

ಸಂಜೆ 6 ರಿಂದ ಬಜನೆ ಕಾರ್ಯಕ್ರಮ ನಡೆಯಿತು. ಬಳಿಕ ಶ್ರಿ ಪುರೋಹಿತ ನಟರಾಜ ಶರ್ಮಾ ಇವರ ಪೌರೋಹಿತ್ಯ ದಲ್ಲಿ ಶ್ರಿ ವರಮಹಾಲಕ್ಷ್ಮಿ ಪೂಜೆ ನಡೆಯಿತು.

ಬಳಿಕ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇದರ ಅಧ್ಯಾಪಕರಾದ ಶ್ರೀಮತಿ ಮಮತ ಮೂಡಿತ್ತಾಯ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ಭಾರತೀಯ ಪರಂಪರೆಯಲ್ಲಿ ಮಕ್ಕಳು ದೇವರು ಎಂಬ ಭಾವನೆಯಿದೆ. ಹಾಗಾಗಿ, ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ, ಪರಂಪರೆ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು. ಸಂಸ್ಕಾರದ ಆಹಾರ ನೀಡಿ ಬೆಳೆಯುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಮನೆಯೇ ಮೊದಲ ಪಾಠಶಾಲೆ. ತಾಯಿ ಮೊದಲು ಗುರು. ಹಾಗಾಗಿ , ತಾಯಂದಿರು ತಮ್ಮ ಮಕ್ಕಳಿಗೆ ಸಾಮರಸ್ಯ, ಸ್ನೇಹ, ಹೊಂದಾಣಿಕೆ, ಪ್ರಾಮಾಣಿಕತೆಯನ್ನು ಚಿಕ್ಕಂದಿನಿಂದಲೇ ಕಲಿಸಬೇಕು. ಬಾಲ್ಯದಲ್ಲಿ ಪಡೆದ ಸಂಸ್ಕಾರ ಜೀವನ ಪರ್ಯಂತ ಉಳಿಯುತ್ತದೆ. ಉತ್ತಮ ವ್ಯಕ್ತಿಯಾಗಲು ದಾರಿ ತೋರುತ್ತದೆ ಎಂದರು.

ನಮ್ಮ ನಡೆ-ನುಡಿ ಚೆನ್ನಾಗಿದ್ದರೆ ಮಾತ್ರ ಭಕ್ತಿ ಬರುತ್ತದೆ, ಅದು ಒಂದೆರಡು ದಿನದಲ್ಲಿ ಬರುವುದಿಲ್ಲ,ಮಹಿಳೆಯರಿಗೆ ಆಲಿಸುವ ತಾಳ್ಮೆ ಬೇಕು ಅದಕ್ಕೆ ನಮ್ಮ ಆತ್ಮ ಪರಿಷ್ಕರಿಸಬೇಕು ಹಾಗಾಗಿ ಇಂತಹ ಪೂಜೆಗಳು ನಡೆಯುತ್ತಿರಬೇಕು ಎಂದು ಹೇಳಿದರು. ಜೊತೆಗೆ ಅಷ್ಟಲಕ್ಷ್ಮಿಯ ಕುರಿತು ಸೇರಿದ ಸಭಿಕರಿಗೆ ತಿಳಿಸಿ ಕೊಟ್ಟರು.

ಬಳಿಕ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಕಾರ್ಯಕ್ರಮ ಸಹಕಾರ ನೀಡಿದ ದಾನಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಪುಷ್ಪಾ ರಾಧಾಕೃಷ್ಣ ಮಾಣಿಬೆಟ್ಟು, ಉಪಾಧ್ಯಕ್ಷೆ ಶ್ರೀಮತಿ ಶಾರದಾ ಎನ್.ರಾವ್, ಕಾರ್ಯದರ್ಶಿ ಶ್ರೀಮತಿ ಚಿತ್ರಲೇಖ ಮಡಪ್ಪಾಡಿ, ಕೋಶಾಧಿಕಾರಿ ಶ್ರೀಮತಿ ವಿಜಯಲಕ್ಷ್ಮಿ ಕೊಡಿಯಾಲಬೈಲು, ಸಂಯೋಜಕಿ ಶ್ರೀಮತಿ ಲತಾ ಪ್ರಸಾದ್ ಕುದ್ಪಾಜೆ, ಜತೆ ಕಾರ್ಯದರ್ಶಿ ಶ್ರೀಮತಿ ಜಯಮಾಲ ಕುದ್ಪಾಜೆ, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಜಯಂತಿ ಕೆ.ಬಿ, ಶ್ರೀಮತಿ ಪದ್ಮಾವತಿ ಕೊಡಿಯಾಲಬೈಲು, ಸದಸ್ಯರುಗಳು, ಸುಳ್ಯ ನಗರ ಘಟಕದ ಅಧ್ಯಕ್ಷೆ ಶ್ರೀಮತಿ ಹರ್ಷ ಕರುಣಾಕರ, ಕಾರ್ಯದರ್ಶಿ ಶ್ರೀಮತಿ ಸುಜಾತ ಕಿರಣ ಕುರುಂಜಿ, ಪದಾಧಿಕಾರಿಗಳು, ವರಲಕ್ಷ್ಮಿ ಯುವತಿ ಮಂಡಲ ಕೊಡಿಯಾಲಬೈಲು ಇದರ ಅಧ್ಯಕ್ಷೆ ಶ್ರೀಮತಿ ಪದ್ಮಾವತಿ ಕೊಡಿಯಾಲಬೈಲು ವಿವಿಧ ಸಮಿತಿ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಇದ್ದರು.

ಗೌರವ ಸಲಹೆಗಾರರಾದ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಪುಷ್ಪಾ ರಾಧಾಕೃಷ್ಣ ಮಾಣಿಬೆಟ್ಟು ಸ್ವಾಗತಿಸಿ, ಚಿತ್ರಲೇಖಾ ಮಡಪ್ಪಾಡಿ ಧನ್ಯವಾದ ಗೈದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು.