ಸುಬ್ರಹ್ಮಣ್ಯ ಗ್ರಾ. ಪಂ. ವತಿಯಿಂದ ವಿಶೇಷ ಚೇತನರಿಗೆ ಸಹಾಯ ಹಸ್ತ

0

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಸ್ವಂತ ನಿಧಿಯಲ್ಲಿ ವಿಶೇಷ ಚೇತನರ ಬೇಡಿಕೆಗೆ ಅನುಗುಣವಾಗಿ ಫಲಾನುಭವಿಗಳಿಗೆ ವಿವಿಧ ಸಹಾಯ ಇತ್ತೀಚೆಗೆ ನೀಡಲಾಯಿತು.

ಗ್ರಾ.ಪಂ ವ್ಯಾಪ್ತಿಯ
14 ಜನರಿಗೆ ಮಂಚ, 7 ಫಲಾನುಭವಿಗಳಿಗೆ ನೀರಿನ ಸಿಂಟೆಕ್ಸ್ ಟ್ಯಾಂಕ್, 3 ಜನರಿಗೆ ಫ್ಯಾನ್ , ಇಬ್ಬರಿಗೆ ಶೌಚಾಲಯ ಸಹಾಯಧನ ಮತ್ತ ವೈದ್ಯಕೀಯ ವೆಚ್ಚ ಹಸ್ತಾಂತರಿಸಲಾಯಿತು.

ಈ ಸಂದರ್ಭ
ಗ್ರಾ.ಪಂ ಅಧ್ಯಕ್ಷೆ ಸಂಜಾತ ಕಲ್ಲಾಜೆ, ಉಪಾಧ್ಯಕ್ಷ ಎಚ್ ಎಲ್ ವೆಂಕಟೇಶ್, ಸದಸ್ಯರುಗಳಾದ ರಾಜೇಶ್ ಎನ್ ಎಸ್, ಹರೀಶ್ ಇಂಜಾಡಿ, ಭಾರತಿ ದಿನೇಶ್, ಮೋಹನ ಕೋಟಿಗೌಡನ ಮನೆ, ನಾರಾಯಣ ಅಗ್ರಹಾರ, ದಿಲೀಪ್ ಉಪ್ಪಳಿಕೆ, ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ, V.R.W. ದಿವ್ಯ ಮತ್ತಿತರರು ಉಪಸ್ಥಿತರಿದ್ದರು.