ಕೋಲ್ಕತಾದ ಆರ್.ಜಿ.ಆರ್. ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆ ರೊಬ್ಬರನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಸುಳ್ಯ ವಕೀಕರ ಸಂಘದ ವತಿಯಿಂದ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಘಟನೆಗೆ ಸಂಬಂಧಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೊಳಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಮತ್ತು ವೈದ್ಯರಿಗೆ ರಕ್ಷಣೆ ನೀಡುವಂತೆಯೂ ಕೇಳಲಾಗಿದೆ.
ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘ ಸುಳ್ಯದ ಅಧ್ಯಕ್ಷೆ ಡಾ.ವೀಣಾ, ಗೌರವ ಕಾರ್ಯದರ್ಶಿ ಡಾ.ರವಿಕಾಂತ್, ಐಎಂಎ ಮತ್ತು ಎಎಂಎಸ್ ಕರ್ನಾಟಕ ಸ್ಟೇಟ್ ಚಾಪ್ಟರ್ ಮುಖ್ಯಸ್ಥೆ ಡಾ. ಗೀತಾ ದೊಪ್ಪ, ಡಾ. ರವಿಶಂಕರ್, ಡಾ. ವಿ.ಎಸ್ ಪಾರೆ, ಡಾ. ಹಿಮಕರ, ಡಾ. ಕರುಣಾಕರ ಕೆ.ವಿ., ಡಾ. ಅರ್ಚನಾ, ಡಾ.ವೆಂಕಟಕೃಷ್ಣ ಭಟ್ , ಡಾ. ಸೌಮ್ಯ, ಡಾ. ಸಾಯಿಗೀತಾ, ಡಾ. ನವ್ಯ, ಡಾ. ರಂಗನಾಥ್, ಡಾ. ಭವ್ಯ, ಡಾ.ಹಸೀನಾ, ಡಾ.ಬೋರ್ಕರ್, ಡಾ.ರೋಶನ್, ಡಾ.ಗಣೇಶ್ ಶರ್ಮ ಮೊದಲಾದವರು ಇದ್ದರು.