ಕಾರ್ಯದರ್ಶಿ ಹುದ್ದೆಯಿಂದ ಅಬೂಬಕ್ಕರ್ ಸಿದ್ದಿಕ್ ಪಿ.ಎ. ಹಾಗೂ ಸದಸ್ಯರಾದ ಅಬ್ದುಲ್ ಜುನೈದ್ ಸಖಾಫಿ ವಜಾ
ಸುಳ್ಯ ತಾಲೂಕು ಎಲಿಮಲೆ ಜುಮಾ ಮಸ್ಜಿದ್ ಇದರ ಆಡಳಿತ ಸಮಿತಿಯ ನೂತನ ಪದಾಧಿಕಾರಿಗಳ ಪಟ್ಟಿಯನ್ನು ದ. ಕ ಜಿಲ್ಲಾ ವಖ್ಫ್ ಕಚೇರಿ ನೀಡಿದೆ ಎಂದು ತಿಳಿದು ಬಂದಿದೆ.
ನೂತನ ಪಟ್ಟಿಯಲ್ಲಿ ಮೊದಲು ಕಾರ್ಯದರ್ಶಿ ಯಾಗಿದ್ದ ಅಬೂಬಕ್ಕರ್ ಸಿದ್ದಿಕ್ ಪಿ ಎ, ಹಾಗೂ ಸದಸ್ಯರಾಗಿದ್ದ ಅಬ್ದುಲ್ ಜುನೈದ್ ಸಖಾಫಿ ಯವರನ್ನು ಜಮಾಅತ್ ನ ಕೆಲವು ಸದಸ್ಯರ ಆಕ್ಷೇಪಣೆ ಬಂದ ಹಿನ್ನಲೆಯಲ್ಲಿ ಬಿಡಲಾಗಿದೆ ಎನ್ನಲಾಗಿದೆ.
23.02.2024 ರಂದು ಜಮಾಅತ್ ಕಮಿಟಿಯ ಮಹಾ ಸಭೆ ನಡೆದು 11 ಮಂದಿ ನೂತನ ಆಡಳಿತ ಸಮಿತಿಗೆ ಸದಸ್ಯರನ್ನಾಗಿ ಮಾಡಿ ಬಳಿಕ ಪದಾಧಿಕಾರಿಗಳನ್ನು ಆಯ್ಕೆಗೊಳಿಸಿ ಅದರ ಪಟ್ಟಿಯನ್ನು ರಾಜ್ಯ ವಖ್ಫ್ ಬೋರ್ಡಿನ ಅನುಮೋದನೆಗಾಗಿ ದ ಕ ಜಿಲ್ಲಾ ವಖ್ಫ್ ಸಲಹಾ ಸಮಿತಿಗೆ ಕಳುಹಿಸಿ ಕೊಡಲಾಗಿತ್ತು.
ಈ ವೇಳೆ ನೂತನ ಕಮಿಟಿಯವರು ಸಲ್ಲಿಸಿದ್ದ ಪಟ್ಟಿಯಲ್ಲಿ ಆಕ್ಷೇಪಣೆಗಳು ಇದ್ದಲ್ಲಿ ತಿಳಿಸಲು ಸಾರ್ವಜನಿಕ ತಿಳುವಳಿಕೆಗಾಗಿ ಜಿಲ್ಲಾ ವಖ್ಫ್ ಅಧಿಕಾರಿಯವರು ಎಲಿಮಲೆ ಮಸೀದಿಯಲ್ಲಿ ಪ್ರಕಟಿಸಿದ್ದರು.
ಈ ಸಮಿತಿಯ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಪಿ.ಎ. ಹಾಗೂ ಸಮಿತಿ ಸದಸ್ಯರಾದ ಅಬ್ದುಲ್ ಜುನೈದ್ ಸಖಾಪಿ ರವರು ವಖ್ಫ್ ನಿಯಮಾವಳಿ ಪ್ರಕಾರ ನೇಮಕಗೊಂಡಿಲ್ಲವೆಂದು ಹಾಗೂ ಸದರಿಯವರನ್ನು ಆಡಳಿತ ಸಮಿತಿಯಿಂದ ಕೈ ಬಿಡಬೇಕೆಂದು ದಾಖಲೆಗಳೊಂದಿಗೆ ಜಮಾಅತಿನ ಕೆಲವು ಸದಸ್ಯರು ಈ ವೇಳೆ ಆಕ್ಷೇಪಣೆಯನ್ನು ಸಲ್ಲಿಸಿದ್ದರು.
ಈ ಆಕ್ಷೇಪಣೆಯನ್ನು ಪರಿಶೀಲನೆ ನಡೆಸಿದ ದ. ಕ. ಜಿಲ್ಲಾ ವಖ್ಫ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ವಖ್ಫ್ ಅಧಿಕಾರಿಯವರು ಅವರ ಆಯ್ಕೆಯ ಪ್ರಕ್ರಿಯೆ ಸಮರ್ಪಕವಾಗಿಲ್ಲವೆಂದು ಮೇಲಿನ ಇಬ್ಬರನ್ನು ಕೈ ಬಿಟ್ಟು 9 ಜನರ ಆಡಳಿತ ಸಮಿತಿಯನ್ನು ಅನುಮೋದನೆಗೆ ಪ್ರಕಟಿಸಿರುತ್ತಾರೆ.
ಸದ್ರಿ ಸಮಿತಿಯ ಖಜಾಂಚಿ ಯಾಗಿದ್ದ ಇಬ್ರಾಹಿಂ ಜಿ.ಎಂ. ರವರನ್ನು ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಅಬ್ದುಲ್ಲಾ ಜಿ.ಎಸ್. ರವರನ್ನು ಆಯ್ಕೆಗೊಳಿಸಿ ಪರಿಷ್ಕೃತ ಆಡಳಿತ ಸಮಿತಿಯನ್ನು ಪ್ರಕಟಿಸಿರುತ್ತಾರೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಸಮಿತಿಯಲ್ಲಿ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಪಿ ಎಚ್, ಉಪಾಧ್ಯಕ್ಷ ಪಿ ಮಹಮ್ಮದ್,ಕಾರ್ಯದರ್ಶಿ ಇಬ್ರಾಹಿಂ ಜಿ ಎಂ, ಕೋಶಾಧಿಕಾರಿ ಅಬ್ದುಲ್ಲ ಜಿ ಎಸ್,ಸದಸ್ಯರುಗಳಾಗಿ ಎ ಪಿ ಸೂಫಿ,ಅಬ್ದುಲ್ ಕುಂಞಿ ಜಿ, ಮಹಮ್ಮದ್ ಫೈಸಲ್,ಮಹಮ್ಮದ್ ಕುಂಞಿ ಎಂ ಎಚ್,ಮಹಮ್ಮದ್ ನಿಯ್ಯಾಝ್ ವೈ ಎಚ್ ಇವರನ್ನು ನೇಮಿಸಲಾಗಿದೆ.