ಅಮರಪಡ್ನೂರಿನ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಆರ್ ಎಕ್ಸ್ ಡಿಎಕ್ಸ್ ಕೇರ್ ಮತ್ತು ಪೀಪಲ್ ಫಾರ್ ಪೀಪಲ್ ರವರ ಪ್ರಾಯೋಜಕತ್ವದೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಶೈಕ್ಷಣಿಕ ಕ್ಷೇತ್ರದ `ಕನ್ನಡ ಶಾಲೆ ಉಳಿಸಿ ಬೆಳೆಸಿ’ ಕಾರ್ಯಕ್ರಮದಡಿಯಲ್ಲಿ ಕೊಡ ಮಾಡಿದ ಕಿಡ್ಸ್ ಪ್ಲೇ ಸಿಸ್ಟಮ್‌ನ ಉದ್ಘಾಟನಾ ಸಮಾರಂಭ ಆ.೧೬ರಂದು ನಡೆಯಿತು.
ಉದ್ಘಾಟನೆಯನ್ನು ಅಮರಮುಡ್ನೂರು ಗ್ರಾ.ಪಂ. ಪಿ.ಡಿ.ಒ. ದಯಾನಂದ ಪತ್ತುಕುಂಜ ನೆರವೇರಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ಭುವನೇಶ್ವರಿ, ಸದಸ್ಯರಾದ ಜನಾರ್ಧನ ಪೈಲೂರು, ರಾಧಾಕೃಷ್ಣ ಕೊರತ್ಯಡ್ಕ, ಸೀತಾ ಹೆಚ್., ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ಉಪಸ್ಥಿತರಿದ್ದರು. ಊರಿನ ಹಿರಿಯರಾದ ಬಾಲಕೃಷ್ಣ ಬೊಳ್ಳೂರು, ಶೀಲಾವತಿ ಕೊಳಂಬೆ, ಪಾರ್ವತಿ ನೇಣಾರು, ವೀಣಾ ಪಡ್ಪು ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷ ಈಶ್ವರ ಕಾಯರ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಗೀತಾ ಎಂ.ಕೆ. , ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಕೊಡಗು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಉನೈಸ್ ಪೆರಾಜೆ, ಅಲ್ಪಸಂಖ್ಯಾತ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ರೂಪವಾಣಿ ಸ್ವಾಗತಿಸಿದರು. ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಗೀತಾ ವಂದಿಸಿದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಲಾಯಿತು.