ಪಂಜ: ಕೃಷಿ ನಿರ್ವಹಣೆ-ರೋಗ ನಿವಾರಣೆ-ಮಾಹಿತಿ ಕಾರ್ಯಾಗಾರ

0

ತೋಟಗಾರಿಕೆ ಇಲಾಖೆ, ಪರಿವಾರ ಪಂಜ ರೈತ ಉತ್ಪಾದಕ ಕಂಪೆನಿ,
ಗ್ರಾಮ ಪಂಚಾಯತ್ ಪಂಜ , ಲಯನ್ಸ್ ಕ್ಲಬ್ ಪಂಜ, ಜೇಸಿಐ ಪಂಜ ಪಂಚಶ್ರೀ ಇದರ ಸಹಯೋಗದೊಂದಿಗೆ ಕೃಷಿ ನಿರ್ವಹಣೆ-ರೋಗ ನಿವಾರಣೆ ತರಬೇತಿ ಕಾರ್ಯಾಗಾರ ಪಂಜ ಲಯನ್ಸ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡರು ಉದ್ಘಾಟಿಸಿ ‘ಇಂದಿನ ದಿನಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡುವುದು ಅತ್ಯಗತ್ಯ “ಎಂದು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಗಳಾದ ಡಾ.ವಿನಾಯಕ ಹೆಗಡೆ ಹಾಗೂ ಡಾ.ಭವಿಷ್ಯ ವಿಜ್ಞಾನಿಗಳು ಸಿ.ಪಿ.ಸಿ.ಅರ್.ಐ ಅವರು ಸರಿಯಾದ ರೀತಿಯಲ್ಲಿ ರೋಗ ಹಾಗೂ ಪೋಷಕಾಂಶಗಳನ್ನು ನಿರ್ವಹಣೆ ಮಾಡಿ ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ಪಡೆಯುವ ಸರಳ ಸೂತ್ರಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೋರ್ಡೋ ಮಿಶ್ರಣ ತಯಾರಿ ಹಾಗೂ ಇನ್ನಿತರ ಸಿಂಪರಣಾ ದ್ರಾವಣಗಳ ಪಿ.ಹೆಚ್ ಅನ್ನು ಡಿಜಿಟಲ್ ಮಿಟರ್ ಹಾಗೂ ಪಿ.ಹೆಚ್ ಪೇಪರ್ ಮೂಲಕ ಪರೀಕ್ಷಿಸುವ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿವಾರ ಪಂಜ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ವಹಿಸಿದ್ದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ , ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೀವನ್ ಮಲ್ಕಜೆ, ತೋಟಗಾರಿಕೆ ಸಹಾಯಕಿ ಮಧುಶ್ರೀ ಉಪಸ್ಧಿತರಿದ್ದರು.
ಕಾರ್ಯಕ್ರಮದಲ್ಲಿ ಪರಿವಾರ ಪಂಜ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಕಾರ್ಯಪ್ಪ ಗೌಡ ಚಿದ್ಗಲ್ ಸ್ವಾಗತಿಸಿದರು. ಉದಯಶಂಕರ ಅಡ್ಕ ವಂದಿಸಿದರು. ಸಿ.ಇ.ಓ ಜೀವನ್ ಶೆಟ್ಟಿಗದ್ದೆ ನಿರೂಪಿಸಿದರು.ನೂರಾರು ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.