ದ.ಕ.ರಬ್ಬರ್ ಇಂಡಸ್ಟ್ರೀಸ್ ಮತ್ತು ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಕೆ.ಎಫ್.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕರ ಭೇಟಿ – ವಿವಿಧ ಬೇಡಿಕೆಗಳ ಬಗ್ಗೆ ಮನವಿ

0

ದ.ಕ.ರಬ್ಬರ್ ಇಂಡಸ್ಟೀಸ್ ಮತ್ತು ಎಂಪ್ಲಾಯಿಸ್ ಯೂನಿಯನ್ ವತಿಯಿಂದ ನೂತನ ಕೆ.ಎಫ್.ಡಿ.ಸಿ.ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಶಿರೂರುರವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಮಾಡಲಾಯಿತು.
ಕಾರ್ಮಿಕರ ಮನೆಗಳು ಮುರಿದು ಬೀಳುತ್ತಿದ್ದು ಇದನ್ನು ರಿಪೇರಿ ಮಾಡುವಂತೆ,ನಿರಂತರ ಕೆಲಸ ಮಾಡುವ ಕಾರ್ಮಿಕರನ್ನು ಖಾಯಂ ಗೊಳಿಸಬೇಕು,ಪ್ಲಾಂಟೇಶನ್ ಕಳೆ ತೆಗೆಯುವ ಬಗ್ಗೆ ,ಕಾರ್ಮಿಕರಿಗೆ ರೈನ್ ಕೋಟ್ ನೀಡುವ ಬಗ್ಗೆ ಮನವಿ ನೀಡಲಾಯಿತು.


ಇದಕ್ಕೆ ಸ್ಪಂದಿಸಿದ ವ್ಯವಸ್ಥಾಪಕ ನಿರ್ದೇಶಕರು ಮಳೆ ಕಡಿಮೆ ಆದ ಕೂಡಲೇ ವಿಭಾಗೀಯ ವ್ಯವಸ್ಥಾಪಕರಿಗೆ ತಿಳಿಸಿ ಮನೆಗಳನ್ನು ಪರಿಶೀಲಿಸಿ ರಿಪೇರಿಗೆ ವ್ಯವಸ್ಥೆ ಮಾಡುವುದಾಗಿ ಮತ್ತು ಕಾರ್ಮಿಕರನ್ನು ಖಾಯಂಗೊಳಿಸುವ ಬಗ್ಗೆ ,ಪ್ಲಾಂಟೇಶನ್ ಕಳೆ ತೆಗೆಯುವ ಬಗ್ಗೆಯು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.


ಈ ಸಂದರ್ಭದಲ್ಲಿ ದ.ಕ.ರಬ್ಬರ್ ಇಂಡಸ್ಟ್ರೀಸ್ & ಎಂಪ್ಲಾಯಿಸ್ ಇದರ ಅಧ್ಯಕ್ಷ ಸೆಲ್ವಕುಮಾರ್ ಕೊಂಬಾರು, ಉಪಾಧ್ಯಕ್ಷ ಕುಮಾರನ್ ಸಿಕೂಪ್, ಪ್ರಧಾನ ಕಾರ್ಯದರ್ಶಿ ರಾಮಸ್ವಾಮಿ (ಆನಂದ)
ಸದಸ್ಯರಾದ ಬಾಲಸುಬ್ರಹ್ಮಣ್ಯಂ 72,ರಾಮಕುಮಾರ್ ದುಗಲಡ್ಕ ಕೂಟೇಲು,,ಶಿವರಾಜ್ ಓಟಕಜೆ ಉಪಸ್ಥಿತರಿದ್ದರು.