ಮೆಸ್ಕಾಂ ನಿವೃತ್ತ ಅಧಿಕಾರಿ ಕೆದಂಬಾಡಿ ಚಂದ್ರಶೇಖರ್ ರಿಗೆ ಪತ್ನಿ ವಿಯೋಗ

0

ಮೆಸ್ಕಾಂ ಹಿರಿಯ ಅಧಿಕಾರಿಯಾಗಿ ನಿವೃತ್ತರಾಗಿರುವ ಸುಳ್ಯ ಪುರಭವನ ಬಳಿಯ ನಿವಾಸಿ ಕೆದಂಬಾಡಿ ಚಂದ್ರಶೇಖರ್ ರವರ ಧರ್ಮಪತ್ನಿ ಶ್ರೀಮತಿ ವೇದಾವತಿ ಯವರು ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಅವರ ಓರ್ವ ಪುತ್ರ ತೇಜಸ್ವಿ ಇಂಗ್ಲೆಂಡ್ ನಲ್ಲಿದ್ದು, ಮಗಳು ಸೌರಭ ಅಮೇರಿಕಾದಲ್ಲಿ ವಾಸವಾಗಿದ್ದಾರೆ. ಇನ್ನೋರ್ವ ಪುತ್ರ ಪ್ರಸಿದ್ಧ ನರರೋಗ ತಜ್ಞ ಡಾ. ರಕ್ಷಿತ್ ಕೆದಂಬಾಡಿ ಮಂಗಳೂರಿನಲ್ಲಿ ಸೇವೆ ಸಲ್ಲಿ ಸುತ್ತಿದ್ದಾರೆ. ವೇದಾವತಿಯವರು ಐವರ್ನಾಡಿನ ದಿ.ಕುದುಂಗು ಕೃಷ್ಣಪ್ಪ ಗೌಡರ ಪುತ್ರಿ.
ಅವರ ಅಂತ್ಯಕ್ರಿಯೆ ನಾಳೆ ಸುಳ್ಯದ ವಿಮುಕ್ತಿ ಧಾಮ ದಲ್ಲಿ ಸುಮಾರು 12.30 ಕ್ಕೆ ನಡೆಯಲಿದೆ. ಬೆಳಿಗ್ಗೆ 10.30 ರಿಂದ 12 ರ ತನಕ ಕಾಲೇಜು ರಸ್ತೆಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನ ಕ್ಕೆ ಅವಕಾಶ ವಿದೆ.