ಸೋನಾ ಅಡ್ಕಾರ್ ಳಿಗೆ ಯೋಗದಲ್ಲಿ ಹ್ಯಾಟ್ರಿಕ್ ಪ್ರಶಸ್ತಿ

0

ಪ್ರತಿಭಾನ್ವಿತ ಯೋಗಪಟು ಸೋನಾ ಅಡ್ಕಾರ್ ಳಿಗೆ ಯೋಗದಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಲಭಿಸಿದೆ.

10ನೇ ಅಂತರಾಷ್ಟ್ರೀಯ ಯೋಗಾಸನ ಪ್ರಯುಕ್ತ SGS ಇಂಟರ್ ನ್ಯಾಷನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ರಿಸರ್ಚ್ ಸೆಂಟರ್ (ರಿ) ಹಾಗೂ ರಿಯೋ ಮಿರಿಡಿಯನ್ ಹೋಟೆಲ್ ಮೈಸೂರಿನ ಹಾರಿಕ ಫೌಂಡೇಶನ್ ಆ‌. 4ರಂದು ಮೈಸೂರಿನಲ್ಲಿ ನಡೆಸಿದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಟ್ರೇಡಿಷನಲ್ ಚಾಂಪಿಯನ್ ಶಿಪ್ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.

ಅಲ್ಲಿ ನಡೆದ ಓನ್ ಚಾಯಿಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಚಾಂಪಿಯನ್ ಆಫ್ ಚಾಂಪಿಯನ್ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.

ಈಕೆ ಜಾಲ್ಸೂರು ಗ್ರಾಮದ ಅಡ್ಕಾರ್ ಮನೆತನದ ಶರತ್ ಅಡ್ಕಾರ್ ಹಾಗೂ ಶೋಭ ಶರತ್ ರವರ ಸುಪುತ್ರಿಯಾಗಿದ್ದು, ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದು ಯೋಗ ಗುರು ಸಂತೋಷ್ ಮುಂಡೋಕಜೆ ಇವರ ಬಳಿ ಯೋಗಾಭ್ಯಾಸ ಮಾಡುತ್ತಿದ್ದಾಳೆ.