ಅರಂತೋಡು ಸ.ಹಿ.ಪ್ರಾ. ಶಾಲೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗ ಹಾಗೂ ಗೈಡ್ ಘಟಕದ ಉದ್ಘಾಟನೆ

0

ಅರಂತೋಡು ಸ. ಮಾ. ಹಿ .ಪ್ರಾ. ಶಾಲೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗ ಹಾಗೂ ಗೈಡ್ ಘಟಕದ ಉದ್ಘಾಟನೆ ಹಾಗೂ ನೂತನ ಎಸ್.ಡಿ.ಎಂ.ಸಿ.ಯನ್ನು ಆ.21ರಂದು ರಚಿಸಲಾಯಿತು.

ಶಾಲಾ ಎಸ್. ಡಿ.ಎಂ. ಸಿ. ಅಧ್ಯಕ್ಷ ಸುರೇಶ್ ಯು. ಕೆ. ಅವರು ಅಧ್ಯಕ್ಷತೆ ವಹಿಸಿದ್ದರು. ಆಂಗ್ಲ ಮಾಧ್ಯಮ ವಿಭಾಗವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಉದ್ಘಾಟಿಸಿ ಶುಭ ಹಾರೈಸಿದರು. ಗೈಡ್ ವಿಭಾಗದ ಉದ್ಘಾಟನೆಯನ್ನು ಭಾರತ್ ಸ್ಕೌಟ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಶಶಿಧರ ಎಂ. ಜೆ. ಅವರು ಉದ್ಘಾಟಿಸಿ ಮಾತನಾಡಿದರು.

ವೇದಿಕೆಯಲ್ಲಿ ಸ್ಕೌಟ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಪ್ರೇಮಲತಾ ಎ. ಹೆಚ್., ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಬಳ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್ ಉಪಸ್ಥಿತರಿದ್ದರು.


ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ ಸ್ವಾಗತಿಸಿದರು. ಆಂಗ್ಲ ಮಾಧ್ಯಮ ವಿಭಾಗದ ಬಗ್ಗೆ ಶ್ರೀಮತಿ ಭಾನುಮತಿ ಹಾಗೂ ಗೈಡ್ ಘಟಕದ ಬಗ್ಗೆ ಕು.ರೇವು ಮಾತನಾಡಿದರು.ಸಹಶಿಕ್ಷಕಿ ಶ್ರೀಮತಿ ಗೀತಾಕುಮಾರಿ ವಂದಿಸಿದರು.


ಜಿ. ಪಿ‌ ಟಿ. ಶಿಕ್ಷಕಿ ಶ್ರೀಮತಿ ರೇಷ್ಮ ಕಾರ್ಯಕ್ರಮ ನಿರೂಪಿಸಿದರು.