ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಛೇರಿ ಸಿಬ್ಬಂದಿಗಳು ಹಾಗು ಗೃಹರಕ್ಷಕರಿಂದ 2024ನೇ ಸಾಲಿನ ರಾಷ್ಟ್ರಪತಿ ಪದಕ ಪುರಸ್ಕತರಾದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ಅವರಿಗೆ ಆ. 21ರಂದು ಸನ್ಮಾನ ಕಾರ್ಯಕ್ರಮ ನಡೆಯಿತು.
ಸನ್ಮಾನವನ್ನು ಸ್ವೀಕರಿಸಿದ ಡಾ|| ಮುರಲೀ ಮೋಹನ ಚೂಂತಾರು ರವರು ಮಾತನಾಡಿ ಈ ಪದಕ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಹೋದರ ಸಹೋದರಿ ಗೃಹರಕ್ಷಕರು ಮತ್ತು ಗೃಹರಕ್ಷಕಿಯರಿಗೆ ಸಲ್ಲುತ್ತದೆ. ಮುಂದೆಯೂ ನಿಮ್ಮ ಸಹಕಾರವನ್ನು ಬಯಸುತ್ತೇನೆ.
ಹಿಂದಿನ ಕಾರ್ಯಚಟುವಟಿಕೆಗಳಿಗಿಂತ ಹತ್ತು ಪಟ್ಟು ಹೆಚ್ಚು ಕಾರ್ಯ ನಿರ್ವಹಿಸುತ್ತೇನೆ.
ಪ್ರಶಸ್ತಿ ಪಡೆಯುವುದರಿಂದ ಒಬ್ಬ ವ್ಯಕ್ತಿಯ ಸಾಮಾಜಿಕ ಬದ್ಧತೆ, ಕಳಕಳಿ ಮತ್ತು ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ. ಗೃಹರಕ್ಷಕ ದಳದಲ್ಲಿ ಕೆಲಸ ಮತ್ತು ನಿಷ್ಕಾಮ ಸೇವೆಯಿಂದ ಮಾನಸಿಕ ನೆಮ್ಮದಿ ಮತ್ತು ಸಂತೃಪ್ತಿ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ. ಮತ್ತು ದಲಾಯತ್ ಶ್ರೀಮತಿ ಮಂಜುಳಾ ಲಮಾಣಿ ಹಾಗೂ ಮಂಗಳೂರು ಘಟಕದ ಸಾರ್ಜಂಟ್ ಸುನಿಲ್ ಕುಮಾರ್, ಧನಂಜಯ, ಜ್ಞಾನೇಶ್, ನವೀನ್ ಕುಮಾರ್, ಜೀವನ್ ಡಿ’ಸೋಜ, ಅರವಿಂದ್ ರಾಜೇಶ್ ಗಟ್ಟಿ, ಸಂತೋಷ್ ಜಾದವ್, ಚಂದ್ರಶೇಖರ್, ಸುಲೋಚನಾ, ನಿಶಾ ಉಪಸ್ಥಿತರಿದ್ದರು.