ಹರಿಹರ ಪಲ್ಲತ್ತಡ್ಕ ಮನೆ ಮೇಲೆ ಮರ ಬಿದ್ದು ಎರಡು ಮನೆ ಸಂಪೂರ್ಣ ಹಾನಿ

0

ಒಂದು ಮನೆ ಭಾಗಶ ಜಖಂ

ಹರಿಹರ ಪಲ್ಲತ್ತಡ್ಕ ಗ್ರಾಮದ ಪಲ್ಲತ್ತಡ್ಕ ಕಾಲೋನಿಯಲ್ಲಿರುವ ಮೂರು ಮನೆಗಳ ಮೇಲೆ ತಡರಾತ್ರಿ ಮರ ಬಿದ್ದು ಎರಡು ಮನೆಗಳು ಸಂಪೂರ್ಣ ಹಾನಿ ಯಾಗಿದ್ದು ಮನೆಯೊಳಗಿದ್ದವರು ತೀವ್ರ ಜಖಂಗೊಡಿದ್ದಾರೆ. ಒಂದು ಮನೆ ಭಾಗಶಃ ಹಾನಿಗೊಂಡಿದೆ.


ನಿನ್ನೆ ರಾತ್ರಿ ಸುಮಾರು 12 ಗಂಟೆ ಹೊತ್ತಿಗೆ ಮನೆ ಮಂದಿ ಗಾಢ ನಿದ್ರೆಯಲ್ಲಿದ್ದ ಸಂದರ್ಭ ಮನೆಯ ಪಕ್ಕದಲ್ಲೇ ಇದ್ದ ಮರವೊಂದು ಏಕಾಏಕಿ ಮನೆ ಮೇಲೆ ಬಿದ್ದಿತು. ಪರಿಣಾಮವಾಗಿ ಐತೆ, ರವಿ, ಮಾಲತಿಯವರು ವಾಸವಿರುವ ಮನೆಯ ಛಾವಣಿ ಮತ್ತು ಗೋಡೆ ಸಂಪೂರ್ಣ ಧರಾಶಾಯಿಯಾಯಿತು.

ಮನೆಯೊಳಗೆ ಮಲಗಿದ್ದ ಐತೆ, ರವಿ, ಮಾಲತಿ, ಮಕ್ಕಳಾದ ಆದರ್ಶ ಮತ್ತು ಯಕ್ಷಿತಾ ಹಾಗೂ ಪಕ್ಕದ ಮನೆಯ ಚೋಮುರವರಿಗೆ ಗಾಯಗಳಾಗಿವೆ. ವಿಷಯ ತಿಳಿದು ಸೇರಿದ ಜನ ರಾತ್ರಿಯೇ ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಸೇರಿಸಿದ್ದಾರೆ.

ಯಕ್ಷಿತಾಳಿಗೆ ಹೆಚ್ಚು ಜಖಂ ಆಗಿರದಿರುವುದರಿಂದ ಪಕ್ಕದ ಮನೆಯಲ್ಲಿ ಕುಳ್ಳಿರಿಸಲಾಗಿದೆ. ಅದೇ ಮನೆಯಲ್ಲಿದ್ದ ಪಕ್ಕದ ಮನೆಯ ಚಂರ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅವರು ಆಸ್ಪತ್ರೆಗೆ ದಾಖಲಾಗಿಲ್ಲ.

ಪಕ್ಕದಲ್ಲಿ ಸಂಜೀವ ಎಂಬವರ ಮನೆಯಿದ್ದು ಅವರ ಮನೆಯ ಮೇಲೂ ಈ ವರದ ಗೆಲ್ಲುಗಳು ಬಿದ್ದಿದೆ. ಅದು ತಾರಸಿ ಮನೆಯಾದ ಕಾರಣ ಮೇಲ್ಛಾವಣಿಗೆ ಹಾನಿಯಾಗಿಲ್ಲ. ಆದರೆ ಮನೆಯ ಎದುರುಗಡೆ ಸಿಟೌಟ್ ಗೆ ಹಾಕಲಾಗಿದ್ದ ಶೀಟ್ ಗಳು ಪುಡಿಯಾಗಿವೆ. ಸಂಜೀವರವರ ಬೈಕ್ ಜಖಂಗೊಂಡಿದೆ. ಅವರ ತಾಯಿ ಚೋಮುರವರಿಗೆ ಗಾಯಗಳಾಗಿದ್ದು ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.


ಪಕ್ಕದಲ್ಲಿರುವ ಚರುಂಬರವರ ಮನೆಯ ಮೇಲೆ ಕೂಡಾ ಗೆಲ್ಲುಗಳು ಬಿದ್ದಿದ್ದು, ಆ ಮನೆಯು ಸಂಪೂರ್ಣ ನಾಶಗೊಂಡಿದೆ. ಮನೆಯಲ್ಲಿ ರಾತ್ರಿ ಯಾರೂ ಇರಲಿಲ್ಲ. ಚರುಂಬರವರು ಐತೆಯವರ ಮನೆಯಲ್ಲಿ ಮಲಗಿದ್ದರು.