ಅಜ್ಜಾವರ ಗ್ರಾ.ಪಂ. ಅಧ್ಯಕ್ಷತೆಗೆ ಬೇಬಿ ಕಲ್ತಡ್ಕ ರಾಜೀನಾಮೆ

0

ಅಜ್ಜಾವರ ಗ್ರಾಮ ಪಂಚಾಯತ್ ನ ಅಧ್ಯಕ್ಷತೆಗೆ ಬೇಬಿ ಕಲ್ತಡ್ಕ ರಾಜೀನಾಮೆ ನೀಡಿದ್ದಾರೆ.
ಆ.19ರಂದು ಪುತ್ತೂರಿಗೆ ತೆರಳಿ ಸಹಾಯಕ ಕಮಿಷನರ್ ರಿಗೆ ರಾಜೀನಾಮೆ ಪತ್ರ ನೀಡಿರುವುದಾಗಿ ತಿಳಿದುಬಂದಿದೆ.

ಅಜ್ಜಾವರ ಗ್ರಾ.ಪಂ. ಅಧ್ಯಕ್ಷತೆ ಪ.ಜಾತಿ ಮಹಿಳೆಗೆ‌ ಮೀಸಲಾಗಿದ್ದು ವರ್ಷದ ಹಿಂದೆ ಅಧ್ಯಕ್ಷತೆ ಸಂದರ್ಭ ಬೇಬಿ ಕಲ್ತಡ್ಕ ಮತ್ತು ದೇವಕಿ ಕಾಟಿಪಳ್ಳ ಇಬ್ಬರೂ ಆಕಾಂಕ್ಷಿಗಳಾಗಿದ್ದರೆಂದೂ, ಬಳಿಕ ಕಾಂಗ್ರೆಸ್ ಮುಖಂಡರು ಮಾತುಕತೆ ನಡೆಸಿ ಆರಂಭದ ಒಂದು ವರ್ಷ ಬೇಬಿ ಕಲ್ತಡ್ಕ ಹಾಗೂ‌ ಬಳಿಕ ಒಂದೂವರೆ ವರ್ಷ ದೇವಕಿಯವರಿಗೆ ಅಧ್ಯಕ್ಷತೆ ನೀಡಲು ನಿರ್ಧರಿಸಿದರೆನ್ನಲಾಗಿದೆ. ಅದರಂತೆ ಬೇಬಿಯವರು ಪಂಚಾಯತ್ ಅಧ್ಯಕ್ಷರಾದರು. ಇದೀಗ ಅವರ ಆಡಳಿತ ಅವಧಿ ಒಂದು ವರ್ಷ ಆಗಿದ್ದು, ಮಾತುಕತೆ ಪ್ರಕಾರ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

ಈ ರಾಜೀನಾಮೆ ಅಂಗೀಕಾರ ಗೊಂಡು ಬಂದ ಬಳಿಕ ನೂತನ ಅಧ್ಯಕ್ಷರ ಆಯ್ಕೆ‌ ನಡೆಯುವುದು.